Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನಮ್ಮ ಹೋರಾಟ ಮುಂದುವರಿಯಲಿದೆ, ಸತ್ಯ ಜಯಿಸಲಿದೆ: ವಿನೇಶ್‌ ಫೋಗಟ್‌

ಹರಿಯಾಣ: ಭಾರತದ ಪ್ರಸಿದ್ಧ ಕುಸ್ತಿಪಟು ವಿನೇಶ್ ಪೊಗಟು ಶನಿವಾರ ರಾತ್ರಿ ತಮ್ಮ ತವರೂರು ಹರ್ಯಾಣದ ಬಲಾಲಿ ಗ್ರಾಮಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಅತ್ಯಂತ ಅದ್ದೂರಿಯಾಗಿ ಮೆರೆವಣಿಗೆ ಮೂಲಕ ಅವರನ್ನು ಸ್ವಾಗತಿಸಿದರು.

ಒಲಿಂಪಿಕ್ಸ್‌ನಿಂದ ನಿರಾಸೆಯಿಂದ ಹೊರಬಂದ ಫೋಗಟ್‌ ಅವರಿಗೆ ತಮ್ಮ ಗ್ರಾಮಸ್ಥರ ಬೆಂಬಲ ಮತ್ತು ಪ್ರೀತಿ ಅವರಿಗೆ ದೊಡ್ಡ ಬಹುಮಾನ ಸಿಕ್ಕಂತಾಗಿದೆ. ಇನ್ನು ಸ್ವಾಗತ ಸಮಾರಂಭದಲ್ಲಿ, 750 ಕೆ.ಜಿ. ಲಡ್ಡು ಹಂಚಿದ್ದು ಸ್ಥಳೀಯರು ವಿನೇಶ್‌ ಫೋಗಟ್‌ಗೆ 100, 500 ಮತ್ತು 2000 ರೂಪಾಯಿಯ ನಗದು ಬಹುಮಾನ ನೀಡಿದರು. ನಂತರ ನೋಟಿನ ಮಾಲೆ ಹಾಕಿ ಸನ್ಮಾನಿಸಲಾಯಿತು.

ಈ ವೇಳೆ ಭಾವುಕರಾಗಿ ಮಾತನಾಡಿದ ವಿನೇಶ್ ಫೋಗಟ್‌, ನಾನು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕದ ಘಟ್ಟ ತಲುಪಿಲ್ಲ. ಆದರೆ ನನ್ನ ಗ್ರಾಮಸ್ಥರು ನನಗೆ ನೀಡಿರುವ ಪ್ರೀತಿ ಮತ್ತು ಗೌರವ 1000 ಚಿನ್ನದ ಪದಕಕ್ಕಿಂತಲೂ ಮಿಗಿಲು ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಅವರು ನಮ್ಮ ಹೋರಾಟ ಮುಗಿದಿಲ್ಲ. ಅದು ಮುಂದುವರಿಯಲಿದೆ. ಸತ್ಯ ಜಯಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದಿದ್ದಾರೆ.

ಈ ರೀತಿಯ ಆತ್ಮೀಯ ಸ್ವಾಗತ ಮತ್ತು ಬೆಂಬಲದಿಂದ, ತಮ್ಮ ಸಾಧನೆಗೆ ಇನ್ನಷ್ಟು ಪ್ರೇರಣೆ ಪಡೆಯುತ್ತಿದ್ದೇನೆ ಎಂದರು.

ಈ ವೇಳೆ ಒಲಿಂಪಿಯನ್‌ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್‌, ಬಜರಂಗ್‌ ಪೂನಿಯಾ ಮತ್ತಿತತರರು ಹಾಜರಿದ್ದರು.

 

Tags: