Mysore
16
clear sky

Social Media

ಗುರುವಾರ, 25 ಡಿಸೆಂಬರ್ 2025
Light
Dark

One World One Family Cup: ಚಿಕ್ಕಬಳ್ಳಾಪುರದಲ್ಲಿಂದು ದಿಗ್ಗಜ ಸಚಿನ್‌-ಯುವಿ ಮುಖಾಮುಖಿ

ಚಿಕ್ಕಬಳ್ಳಾಪುರ: ಜಿಲ್ಲೆಯ ಸತ್ಯಸಾಯಿ ಗ್ರಾಮದಲ್ಲಿಂದು ಕ್ರಿಕಟ್‌ ದಿಗ್ಗಜರಾದ ಲಿಟ್ಲಲ್‌ ಮಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಮತ್ತು ಸಿಕ್ಸರ್‌ ಕಿಂಗ್‌ ಯುವರಾಜ್‌ ಸಿಂಗ್‌ ನಡುವಿನ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಇಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕ್ರೀಡಾಂಗಣ ಉದ್ಘಾಟನಾ ಪ್ರಯುಕ್ತ ಒನ್‌ ವರ್ಲ್ಡ್‌ ಒನ್‌ ಫ್ಯಾಮಿಲಿ ಕಪ್‌ ಹೆಸರಿನಲ್ಲಿ ಟಿ20 ಕ್ರಿಕೆಟ್‌ ಪಂದ್ಯವನ್ನು ಆಯೋಜಿಸಲಾಗಿದೆ.

ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಲಾಗಿದ್ದು, ಈ ವಿಶೇಷ ಪಂದ್ಯಕ್ಕೆ ಸತ್ಯಸಾಯಿ ಗ್ರಾಮದಲ್ಲಿರುವ ಸಾಯಿಕೃಷ್ಣನ್ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗಲಿದೆ.

ಪಂದ್ಯವು ಬೆಳಗ್ಗೆ 10 ಗಂಟೆಗೆ ಶುರುವಾಗಲಿದೆ. ಈ ಪಂದ್ಯವನ್ನು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಲೈವ್ ವೀಕ್ಷಿಸಬಹುದು. ಅಂತೆಯೆ ಲೈವ್ ಸ್ಟ್ರೀಮಿಂಗ್ ಶ್ರೀ ಮಧುಸೂದನ್ ಸಾಯಿ ಗ್ಲೋಬಲ್ ಹ್ಯುಮಾನಿಟೇರಿಯನ್ ಮಿಷನ್‌ನ ಯುಟ್ಯೂಬ್ ಚಾನೆಲ್‌ಗಳಲ್ಲಿಯೂ ಲೈವ್‌ ವೀಕ್ಷಣೆ ಮಾಡಬಹುದಾಗಿದೆ.

ಈ ಪಂದ್ಯಕ್ಕೆ ಸುನಿಲ್ ಗವಾಸ್ಕರ್ ಮುಂದಾಳತ್ವ ವಹಿಸಲಿದ್ದಾರೆ. ದಿಗ್ಗಜ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಡ್ಯಾನಿ ಮೋರಿಸನ್, ಮುತ್ತಯ್ಯ ಮುರಳೀಧರನ್, ಇರ್ಫಾನ್ ಪಠಾನ್, ಮಾಂಟೇ ಪನೇಸರ್, ವೆಂಕಟೇಶ್ ಪ್ರಸಾದ್, ಯೂಸಫ್ ಪಠಾನ್ ಸೇರಿದಂತೆ ಅನೇಕ ವಿಶ್ವ ಕ್ರಿಕೆಟ್‌ನ ಹಿರಿಯ ಆಟಗಾರರು ಈ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಒನ್ ವರ್ಲ್ಡ್ ತಂಡ: ಸಚಿನ್ ತೆಂಡೂಲ್ಕರ್ (ನಾಯಕ), ನಮನ್ ಓಜಾ, ಉಪುಲ್ ತರಂಗ, ಅಲ್ವಿರೋ ಪೀಟರ್ಸನ್, ಸುಬ್ರಮಣ್ಯಂ ಬದ್ರಿನಾಥ್, ಇರ್ಫಾನ್ ಪಠಾಣ್, ಅಶೋಕ್ ದಿಂಡಾ, ಅಜಂತಾ ಮೆಂಡಿಸ್, ಹರ್ಭಜನ್ ಸಿಂಗ್, ಮಾಂಟಿ ಪನೇಸರ್, ಆರ್‌ಪಿ ಸಿಂಗ್, ಡ್ಯಾನಿ ಮಾರಿಸನ್.

ಒನ್ ಫ್ಯಾಮಿಲಿ ತಂಡ: ಯುವರಾಜ್ ಸಿಂಗ್ (ನಾಯಕ), ಪಾರ್ಥಿವ್ ಪಟೇಲ್, ಮೊಹಮ್ಮದ್ ಕೈಫ್, ಡ್ಯಾರೆನ್ ಮ್ಯಾಡಿ, ಅಲೋಕ್ ಕಪಾಲಿ, ರೋಮೇಶ್ ಕಲುವಿತಾರಣ, ಯೂಸುಫ್ ಪಠಾಣ್, ಜೇಸನ್ ಕ್ರೆಜ್ಜಾ, ಮುತ್ತಯ್ಯ ಮುರಳೀಧರನ್, ಮಖಾಯಾ ಎನ್ಟಿನಿ, ಚಾಮಿಂದಾ ವಾಸ್, ವೆಂಕಟೇಶ್ ಪ್ರಸಾದ್.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!