Mysore
25
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಮುಂದೊಂದು ದಿನ ಸಲಿಂಗ ವಿವಾಹ ವಾಸ್ತವವಾಗಲಿದೆ: ಕ್ರೀಡಾಪಟು ದ್ಯುತಿ ಚಂದ್

ನವದೆಹಲಿ: ಸಲಿಂಗ ವಿವಾಹದ ಬಗ್ಗೆ ಭಾರತದ ಅತ್ಯಂತ ವೇಗದ ಮಹಿಳೆ ಎಂದೇ ಖ್ಯಾತರಾಗಿರುವ ಕ್ರೀಡಾಪಟು ದ್ಯುತಿ ಚಂದ್ ಆಶಾಭಾವ ವ್ಯಕ್ತಪಡಿಸಿದ್ದು, ಇದು ಮುಂದೊಂದು ದಿನ ವಾಸ್ತವದ ಸ್ಥಿತಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಬಂದ ಹಿನ್ನೆಲೆಯಲ್ಲಿ ದ್ಯುತಿ ಚಂದ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವಿಶೇಷ ವಿವಾಹ ಕಾಯಿದೆ (Special Marriage Act)ಗೆ ಸಂಬಂಧಪಟ್ಟಂತೆ ಕಾನೂನು ರೂಪಿಸಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ. ಅದನ್ನು ನಾವು ವ್ಯಾಖ್ಯಾನಿಸಬಹುದು, ಆದರೆ ಅದನ್ನು ಬದಲಾಯಿಸುವುದು ಸಂಸತ್ತು ಅಂದರೆ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಹೇಳಿದ್ದರು.

ಸಲಿಂಗಿಗಳು ಒಟ್ಟಿಗೆ ಇರುವುದನ್ನು ಸುಪ್ರೀಂ ಕೋರ್ಟ್ ತಡೆದಿಲ್ಲ. ಸಲಿಂಗಿಗಳ ವಿವಾಹಕ್ಕೆ ಸಂಬಂಧಿಸಿದಂತೆ ಕಾನೂನು ಇಲ್ಲದೇ ಇರುವುದರಿಂದ ಅದರಲ್ಲಿ ಮಧ್ಯಪ್ರವೇಶಿಸುವುದಕ್ಕೆ ಸಾಧ್ಯವಿಲ್ಲ ಎಂದಷ್ಟೇ ಹೇಳಿದೆ ಎಂದು ದ್ಯುತಿ ಚಂದ್ ಹೇಳಿದ್ದಾರೆ.

“ಕೇಂದ್ರ ಸರ್ಕಾರ ಮತ್ತು ಸಂಸತ್ತು ಖಂಡಿತವಾಗಿಯೂ ಪ್ರಕರಣವನ್ನು ಪರಿಗಣಿಸುತ್ತದೆ ಮತ್ತು ಭವಿಷ್ಯದಲ್ಲಿ ಸಲಿಂಗ ವ್ಯಕ್ತಿಗಳ ನಡುವಿನ ವಿವಾಹಕ್ಕೆ ಸರಿಯಾದ ಕಾನೂನು ಮಾಡುತ್ತದೆ ಎಂದು ನಾವು ಆಶಾವಾದಿಗಳಾಗಿದ್ದೇವೆ” ಎಂದು ಚಂದ್ ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ