ಲಂಡನ್: ಐಸಿಸಿಯ ಕೆಲವು ನಿಯಮಗಳಿಂದಾಗಿ ಏಕದಿನ ಕ್ರಿಕೆಟ್ ಮಾದರಿಯು ತನ್ನ ಸತ್ವ ಕಳೆದುಕೊಳ್ಳುತ್ತಿದೆ. ವಿಶ್ವಕಪ್ ಟೂರ್ನಿ ಬಿಟ್ಟರೆ ಈ ಮಾದರಿಯು ಅಳಿವಿ ನಂಚಿನ ಕಡೆ ಸಾಗುತ್ತಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ಆಲ್‌ರೌಂಡರ್ ಮೋಯಿನ್ ಅಲಿ ಅಭಿಪ್ರಾಯಪಟ್ಟಿದ್ದಾರೆ.
ನಿಯಮಗಳು ಬಹಳ ಕೆಟ್ಟದ್ದಾಗಿವೆ. ಎರಡು ಚೆಂಡುಗಳನ್ನು ಬಳಕೆ ಮಾಡುತ್ತಿರುವುದರಿಂದ ಆಟದ ಸತ್ವವೇ ಕಾಣೆಯಾಗಿದೆ. ರಿವರ್ಸ್ ಸ್ವಿಂಗ್ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಮತ್ತೇ, ಹಳೆಯದಾದ ಚೆಂಡನ್ನು ಹೊಡೆಯುವ ಬ್ಯಾಟಿಂಗ್ ಕಲೆಯೂ ಮರೆಯಾಗಿದೆ. ಟಿ20 ಮಾದರಿಯ ಕ್ರಿಕೆಟ್‌ನಿಂದ ಬರೀ ದೊಡ್ಡ ಹೊಡೆತಗಳಷ್ಟೇ ಕಾಣುತ್ತಿವೆ. ಆದ ಕಾರಣ ಏಕದಿನ ಮಾದರಿಯು ಅಂತ್ಯವಾಗಿದೆ ಎಂದು ಮೋಯಿನ್ ತಿಳಿಸಿದ್ದಾರೆ.
ಇನ್ನೊಂದೆಡೆ ಶ್ರೀಮಂತ ಫ್ರಾಂಚೈಸಿ ಲೀಗ್ ಟೂರ್ನಿಗಳಿಂದಲೂ ಏಕದಿನ ಮಾದರಿ ಕ್ರಿಕೆಟ್ ನಶಿಸುತ್ತಿದೆ. ಹಣ ಗಳಿಕೆಯ ಭರಾಟೆಯೇ ಹೆಚ್ಚಾಗಿದೆ ಎಂದು ಹೇಳಿದರು.





