ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಶುಭಾರಂಭ ಮಾಡಿದೆ. ಶನಿವಾರ ಇಲ್ಲಿ ನಡೆದ ಬಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡವು ನ್ಯೂಝಿಲ್ಯಾಂಡ್ ತಂಡವನ್ನು 3-2 ಅಂತರದಿಂದ ಮಣಿಸಿತು.
ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದ ಭಾರತ ಪುಟಿದೆದ್ದು ಸೊಗಸಾದ ಪ್ರದರ್ಶನ ನೀಡಿ ಟೀಮ್ ಇಂಡಿಯಾ ಅರ್ಹ ಗೆಲುವು ಸಾಧಿಸಿತು. ಮೊದಲಾವಧಿಯಲ್ಲಿ ನ್ಯೂಝಿಲ್ಯಾಂಡ್ 8ನೇ ನಿಮಿಷದಲ್ಲಿ 1-0ಮುನ್ನಡೆ ಪಡೆಯಿತು. ಬಳಿಕ 24ನೇ ಹಾಗೂ 34ನೇ ನಿಮಿಷದಲ್ಲಿ ಗೋಲು ಗಳಿಸಿದ ಭಾರತ 2-1 ಮುನ್ನಡೆ ಸಾಧಿಸಿತು. 53 ನೇ ನಿಮಿಷದಲ್ಲಿ ಟೀಂಗಳು ಸಮಬಲದಲ್ಲಿದ್ದವು. ನಂತರ 59ನೇ ನಿಮಿಷದಲ್ಲಿ ಗೆಲುವಿನ ಗೋಲು ಗಳಿಸಿದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಭಾರತವು ಜುಲೈ 29ರಂದು ಬಿ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಅರ್ಜಿಂಟೀನ ತಂಡದೊಂದಿಗೆ ಸೆಣಸಾಡಲಿದೆ.



