ಪ್ರಯಣನಗರಿ ಪ್ಯಾರಿನ್‌ನಲ್ಲೀಗ ಒಲಿಂಪಿಕ್ಸ್ ಕ್ರೀಡಾಕೂಟದ ಸಂಭ್ರಮ ಮನೆ ಮಾಡಿದೆ. ಅದ್ದೂರಿ ಕ್ರೀಡೋತ್ಸವ ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾದು ಕುಳಿತಿದೆ. ಬಹು ನಿರೀಕ್ಷಿತ ಈ ಕ್ರೀಡಾ ಹಬ್ಬವನ್ನು ಗೂಗಲ್ ವಿಶೇಷ ಡೂಡಲ್ ಮೂಲಕ ಗೌರವ ನೀಡಿದೆ.
ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭವು ಕ್ರೀಡಾಂಗಣದಲ್ಲಿ ನಡೆಯುವುದು ವಾಡಿಕೆ. ಆದರೆ, ಪ್ಯಾರೀಸ್ ಈ ವಾಡಿಕೆಗೆ ಬ್ರೇಕ್ ಹಾಕಿ ಸೀನ್ ನದಿಯ ಮೇಲೆ ಅದ್ದೂರಿಯಾಗಿ ಉದ್ಘಾಟನೆ ಮಾಡಲಿದೆ. ಅದರಂತೆ ಗೂಗಲ್ ಡೂಡಲ್ ನದಿಯ ವಿನ್ಯಾಸದಲ್ಲಿ ಡೂಡಲ್ ಅನ್ನು ತಯಾರಿಸಿದೆ. ಡೂಡಲ್ ಮೇಲೆ ಕ್ಲಿಕ್ ಮಾಡಿದರೆ, ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನಿಮಗೆ ಸಿಗುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ ಗೂಗಲ್ ಡೂಡಲ್ ಡಿಸೈನರ್ ಹೆಸರನ್ನು ಬಹಿರಂಗಪಡಿಸಿಲ್ಲ.





