ಲಕ್ನೋ : ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಎಕಾನ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ 14ನೇ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಶ್ರೀಲಂಕಾ 209 ರನ್ ಗೆ ಆಲೌಟ್ ಆಗಿದೆ.
ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡಿತು. ಲಂಕಾದ ಆರಂಭಿಕ ಬ್ಯಾಟರ್ಸ್ ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಮೊದಲ ವಿಕೆಟ್ ಪತನ ಕ್ಕೆ 125 ರನ್ ಜೊತೆಯಾಟ ಆಡಿದ ಪತುಮ್ ನಿಸಂಕಾ ಹಾಗೂ ಕುಶಾಲ್ ಪರೇರಾ ಆಸೀಸ್ ಬೌಲರ್ಸ್ ಗಳನ್ನು ಕಾಡಿದರು. ಪತುಮ್ ನಿಸಂಕಾ 8 ಬೌಂಡರಿ ಸಹಿತ 61 ರನ್ ಗಳಿಸಿದರೆ ಕುಶಾಲ್ ಪರೇರಾ 12 ಬೌಂಡರಿ ಸಹಿತ 78 ರನ್ ಬಾರಿಸಿ ಪ್ಯಾಟ್ ಕಮ್ಮಿನ್ಸ್ ಗೆ ವಿಕೆಟ್ ಒಪ್ಪಿಸಿದರು. ಉತ್ತಮ ಆರಂಭದ ಹೊರತಾಗಿಯೂ ತಂಡ ಸ್ಥಿರ ಪ್ರದರ್ಶನ ನೀಡಲು ವಿಫಲವಾಯಿತು.
ಇವರಿಬ್ಬರ ಜೋಡಿಯ ನಂತರ ಶ್ರೀಲಂಕಾ ತಂಡ ಸಂಪೂರ್ಣ ಕುಸಿತ ಕಂಡಿತು. 157 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಲಂಕಾ ಪಡೆ 52ರನ್‌ಗಳಿಗೆ ಉಳಿದ 8 ವಿಕೆಟ್ ಕಳೆದುಕೊಳ್ಳುವ ಮೂಲಕ ದಿಢೀರ್ ಕುಸಿತ ಕಂಡಿತು.
ಚರಿತ್ ಹಸಲಂಕ (25), ಕುಶಾಲ್ ಮೆಂಡಿಸ್ (9), ಸದೀರ ವಿಕ್ರಮ (8), ಧನಂಜಯ್ ಡಿಸಿಲ್ವ ( 7 ) ಚಮಿಕಾ ಕರುಣರತ್ನೆ (2), ದುಣಿತ್ ವೆಲ್ಲಾಲಗೆ (2) ಮತ್ತು ಲಹಿರು ಕುಮಾರ (4) ರನ್ ಗಳಿಸಿ ಪ್ರತಿಯೊಬ್ಬ ಲಂಕಾ ಬ್ಯಾಟರ್ ಪೆವಿಲಿಯನ್ ಪೆರೇಡ್ ನಡೆಸಿದರು.
ಆಸ್ಟ್ರೇಲಿಯ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಆಡಂ ಝಾಂಪ 4 ವಿಕೆಟ್ ಕಬಳಿಸಿದರೆ, ಮಿಷೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ತಲಾ 2, ಗ್ಲೆನ್ ಮ್ಯಾಕ್ಸ್ ವೆಲ್ 1 ವಿಕೆಟ್ ಪಡೆದರು.





