ಪ್ಯಾರಿಸ್: ಸರ್ಬಿಯದ ಟೆನಿಸ್ ಸ್ಟಾರ್ ನೊವಾಕ್ ಜೊಕೊವಿಕ್ ಅವರ ಒಲಿಂಪಿಕ್ಸ್ ಚಿನ್ನದ ಕನಸು ನನಸಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಚಿನ್ನದ ಪದಕವನ್ನು ಜಯಿಸಿ ಸ್ಮರಣೀಯ ಸಾಧನೆ ಮಾಡಿದ್ದಾರೆ.
ಚೊಕೊವಿಕ್ ಭಾನುವಾರ ನಡೆದ ರೋಚ ಫೈನಲ್ ಪಂದ್ಯದಲ್ಲಿ ಸ್ಪೇನ್‌ನ ಕಾರ್ಲೋಸ್ ಅಲ್ಕರಾಝ್ ವಿರುದ್ಧ 7-6(3), 7-6(2) ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ತಮ್ಮ ವೃತ್ತಿ ಬದುಕಿನ ಚೊಚ್ಚಲ ಒಲಿಪಿಂಕ್ಸ್ ಗೋಲ್ಡ್ ಮೆಡಲ್‌ಗೆ ಕೊರಳೊಡ್ಡಿದರು.
37 ವರ್ಷದ ಜೊಕೊವಿಕ್ 1988ರ ನಂತರ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಮೊದಲು ಹಿರಿಯ ಟೆನ್ನಿಸಿಗ ಎನಿಸಿಕೊಂಡಿದ್ದಾರೆ.





