Mysore
36
few clouds

Social Media

ಶುಕ್ರವಾರ, 24 ಏಪ್ರಿಲ 2026
Light
Dark

ರೋಹಿತ್‌, ವಿರಾಟ್‌ ನಿವೃತ್ತಿ ಕುರಿತು ಯಾವುದೇ ಚರ್ಚೆಯಿಲ್ಲ: ಶುಭಮನ್‌ ಗಿಲ್‌

ದುಬೈ: ಭಾರತದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಹಾಗೂ ನಾಯಕ ರೋಹಿತ್‌ ಶರ್ಮಾ ವಿದಾಯದ ಕುರಿತು ಯಾವುದೇ ಚರ್ಚೆ ಆಗಿಲ್ಲ ಎಂದು ಭಾರತ ತಂಡದ ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ ಸ್ಪಷ್ಟಪಡಿಸಿದ್ದಾರೆ.

ರೋಹಿತ್ ಹಾಗೂ ವಿರಾಟ್‌ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ನಂತರ ವಿದಾಯ ಘೋಷಿಸಲಿದ್ದಾರೆ ಎಂಬ ವದಂತಿಗಳು ಓಡಾಡುತ್ತಿದ್ದವು. ಇದನ್ನು ಶುಭಮನ್‌ ಗಿಲ್‌ ತಳ್ಳಿ ಹಾಕಿದ್ದಾರೆ.

ಟೀಂ ಇಂಡಿಯಾ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಇವರಿಬ್ಬರ ವಿದಾಯದ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಗಿಲ್‌ ತಿಳಿಸಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ಪಂದ್ಯವು ನ್ಯೂಜಿಲೆಂಡ್‌ ಹಾಗೂ ಭಾರತ ತಂಡದ ನಡುವೆ ದುಬೈನಲ್ಲಿ ಭಾನುವಾರ ನಡೆಯಲಿದೆ.

Tags:
error: Content is protected !!