ಹೊಸದಿಲ್ಲಿ: ಟಿ20 ವಿಶ್ವಕಪ್‌ಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿದ್ದು, ಐವರಿ ಕೋಸ್ಟ್ ವಿರುದ್ಧ ನಡೆದ ಪಂದ್ಯದಲ್ಲಿ ನೈಜೀರಿಯಾ ತಂಡವು ಐವರಿ ಕೋಸ್ಟ್ ತಂಡವನ್ನು ಕೇವಲ 7ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ.
ಟಾಸ್ ಗೆದ್ದ ನೈಜೀರಿಯಾ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕನ ಆಯ್ಕೆಗೆ ತಕ್ಕಂತೆ ಬ್ಯಾಟ್ ಬೀಸಿದ ನೈಜೀರಿಯಾ ತಂಡದ ಬ್ಯಾಟರ್‌ಗಳೂ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 271 ರನ್ ಕಲೆಹಾಕಿತು. ನೈಜೀರಿಯಾ ಪರ ಬ್ಯಾಟರ್ ಸುಲೈಮಾನ್ 50 ರನ್(29ಎಸೆತ), ಸಲೀಂ ಸಾಲೌ 112 ರನ್(53ಎಸೆತ), ಹಾಗೂ ಕೊನೆಯಲ್ಲಿ ಐಸಾಕ್ ಒಕ್ಪೆ 65 ರನ್(23ಎಸೆತ) ಸಿಡಿಸಿದರು.
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಐವರಿ ಕೋಸ್ಟ್ ತಂಡವು 7.3 ಓವರ್‌ಗಳಲ್ಲಿ 7 ರನ್‌ಗೆ ಆಲೌಟ್ ಆಗುವ ಮೂಲಕ ನೈಜೀರಿಯಾ ತಂಡದ ಮುಂದೆ ಭಾರಿ ಮುಖಭಂಗ ಅನುಭವಿಸಿತು. ಆರಂಭಿಕ ಬ್ಯಾಟರ್ ಮೊಹಮ್ಮದ್ 4 ರನ್ ಗಳಿಸಿದರೆ, ಇಬ್ರಾಹಿಂ, ಅಲೆಕ್ಸಿ ತಲಾ 1 ರನ್‌ಗಳಿಸಿದರು. ಇನ್ನುಳಿದ 7 ಬ್ಯಾಟರ್‌ಗಳು ಸೊನ್ನೆ ಸುತ್ತಿದರು.
ಈ ಮೂಲಕ ನೈಜೀರಿಯಾ ತಂಡವು 264 ರನ್‌ಗಳ ಜಯ ಸಾಧಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಬೃಹತ್ ರನ್‌ಗಳ ಅಂತರದಿಂದ ಗೆದ್ದ ದಾಖಲೆ ಪಟ್ಟಿಯಲ್ಲಿ ನೈಜೀರಿಯಾ ತಂಡ ಮೂದನೇ ಸ್ಥಾನಕ್ಕೇರಿದೆ.