Mysore
14
broken clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ನ್ಯೂಜಿಲೆಂಡ್‌ಗೆ 7 ವಿಕೆಟ್ ಭರ್ಜರಿ ಜಯ

ಆಕ್ಲೆಂಡ್ : ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿಲಿಯಂಮ್ಸ್ ಅಜೇಯ ೯೪, ಲಾಥಮ್ ಅಜೇಯ ೧೪೫ ರನ್ ನೆರವಿನಿಂದ ೭ ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.

ಆಕ್ಲೆಂಡ್‌ನ ಈಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಾಯಕ ಶಿಖರ್ ಧವನ್, ಶುಭಮನ್ ಗಿಲ್ ಮತ್ತು ಶ್ರೇಯಸ್ ಅವರ ಅರ್ಧಶತಕಗಳ ನೆರವಿನಿಂದ ನಿಗಧಿತ ೫೦ ಓವರ್ ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೩೦೬ರನ್ ಗಳಿಸಿ ಕಿವೀಸ್ ಗೆ ಗೆಲ್ಲಲು ೩೦೭ ರನ್ ಗುರಿ ನೀಡಿತ್ತು.
ಈ ಬೃಹತ್ ರನ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ಗೆ ನಾುಂಕ ಕೇನ್ ವಿಲಿಯಂಮ್ಸನ್ ಹಾಗೂ ಟಾಮ್ ಲಾಥಮ್ ಅದ್ಭುತ ಜೊತೆಯಾಟ ಗೆಲುವಿನ ದಡ ಸೇರಿಸಿತು. ನ್ಯೂಜಿಲೆಂಡ್ ೩ ವಿಕೆಟ್ ನಷ್ಟಕ್ಕೆ ೩೦೯ ರನ್ ಹೊಡೆಯಿತು. ವಿಲಿುಂಮ್ಸನ್ ಅಜೇಯ ೯೪ ಹಾಗೂ ಲಾಥಮ್ ಅಜೇಯ ೧೪೫ ರನ್ ಬಾರಿಸಿದರು. ಇನ್ನುಳಿದಂತೆ ಫಿನ್ ಅಲೆನ್ ೨೨, ಕಾನ್ವೇ ೨೪ ಹಾಗೂ ಮಿಚೆಲ್ ೧೧ ರನ್ ಪೇರಿಸಿದ್ದಾರೆ.

ಈ ಹಂತದಲ್ಲಿ ಭಾರತದ ಬೃಹತ್ ಮೊತ್ತದ ಕನಸು ಕಮರುವತ್ತ ಸಾಗಿತು. ಆದರೆ ಮತ್ತೊಂದು ತುದಿಯಲ್ಲಿದ್ದ ಶ್ರೇಯಸ್ ಅಯ್ಯರ್ ನಿಧಾನವಾಗಿ ಲಯ ಕಂಡುಕೊಂಡರು. ಅವರಿಗೆ ಸಂಜು ಸ್ಯಾಮ್ಸನ್ (೩೬ ರನ್) ಮತ್ತು ವಾಷಿಂಗ್ಟನ್ ಸುಂದರ್ (ಅಜೇಯ ೩೭) ಉತ್ತಮ ಸಾಥ್ ನೀಡಿದರು. ಅಯ್ಯರ್  ಕೇವಲ ೭೬ ಎಸೆತಗಲ್ಲಿ ೮೦ ರನ್ ಸಿಡಿಸಿ ಇನ್ನಿಂಗ್ಸ್ ಅಂತಿಮ ಹಂತದಲ್ಲಿ ಸೌಥಿ ಬೌಲಿಂಗ್‌ನಲ್ಲಿ ನಿರ್ಗಮಿಸಿದರು. ಅದೇ ಕೊನೆಯ ಓವರ್‌ನಲ್ಲಿ ಕೊನೆಯ ಎಸೆತದಲ್ಲಿ ಠಾಕೂರ್ ಔಟಾಗುವುದರೊಂದಿಗೆ ಭಾರತದ ಇನ್ನಿಂಗ್ಸ್‌ಗೆ ತೆರೆ ಬಿತ್ತು. ಕಿವೀಸ್ ಪರ ಸೌಥಿ ಮತ್ತು ಫರ್ಗುಸನ್ ತಲಾ ೩ ವಿಕೆಟ್ ಪಡೆದರೆ, ಮಿಲ್ನೆ ೧ ವಿಕೆಟ್ ಪಡೆದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!