ಪ್ಯಾರಿಸ್: ಇಂದು ನಡೆದ ಪ್ಯಾರಿಸ್ ಓಲಂಪಿಕ್ಸ್‌ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತ ಪರವಾಗಿ ಭಾಗವಹಿಸಿದ್ದ ನೀರಜ್ ಚೋಪ್ರಾ, ತಮಗೆ ಸಿಕ್ಕ ಮೊದಲ ಅವಕಾಶದಲ್ಲೇ 89.34 ಮೀ ದೂರಕ್ಕೆ ಎಸೆಯುವ ಮೂಲಕ ನೇರವಾಗಿ ಫೈನಲ್ಸ್ ಪ್ರವೇಶಿಸಿದರು.
ಭಾರತದ ಚಿನ್ನದ ತಾರೆ ನೀರಜ್ ಚೋಪ್ರಾ ಅವರು ಮೊದಲ ಪ್ರಯತ್ನದಲ್ಲೇ ಫೈನಲ್ಸ್ ತಲುಪುವ ಮೂಲಕ ನೀರಜ್ ತಮ್ಮ ಎರಡನೇ ಒಲಂಪಿಕ್ಸ್ ಫೈನಲ್ಸ್‌ಗೆ ಕಾಲಿಟ್ಟಿದ್ದಾರೆ.
ಇದೇ ವಿಭಾಗದಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಭಾರತೀಯ ಕಿಶೋರ್ ಜೆನಾ 80.93 ಮೀ. ಎಸೆದು ಫೈನಲ್ಸ್ ತಲುಪುವಲ್ಲಿ ವಿಫಲರಾಗಿ ನಿರಾಸೆ ಮೂಡಿಸಿದರು. ಇತ್ತ ಪಾಕಿಸ್ತಾನದ ಹರ್ಷದ್ ನದೀಮ್ 86.59 ಮೀ ಜಾವೆಲಿನ್ ಎಸೆದು ಫೈನಲ್ಸ್ ಪ್ರವೇಶಿಸಿದ್ದಾರೆ.
ನೀರಜ್ ಚೋಪ್ರಾ ಅವರ ಫೈನಲ್ಸ್ ಹಣಾಹಣೆ ಇದೇ ಆಗಸ್ಟ್ 8ರಂದು ರಾತ್ರಿ 11.55ಕ್ಕೆ ನಡೆಯಲಿದೆ.





