Mysore
26
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಗೆದ್ದ ಮೈಸೂರು ವಾರಿಯರ್ಸ್

ಬೆಂಗಳೂರು :  ಮಹಾರಾಜ ಟ್ರೋಫಿ ಟಿ20 ಲೀಗ್‌ ನಲ್ಲಿ ಮೈಸೂರು ವಾರಿಯರ್ಸ್ ಮತ್ತೊಂದು ಗೆಲುವು ಸಾಧಿಸಿದೆ. ಪ್ರತಿಕೂಲ ಹವಾಮಾನದಿಂದಾಗಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಮೈಸೂರು ವಾರಿಯರ್ಸ್‌ ತಂಡವು 33 ರನ್ (ವಿಜೆಡಿ ವಿಧಾನ) ಗೆಲುವು ದಾಖಲಿಸಿತು.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮೈಸೂರು ವಾರಿಯರ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 185 ರನ್‌ ಕಲೆಹಾಕಿತು.

ಸಿಎ ಕಾರ್ತಿಕ್ (62) ಅರ್ಧ ಶತಕದಿಂದ ಬಲದಿಂದ ಮೈಸೂರು ಬೃಹತ್‌ ಮೊತ್ತ ಕಲೆಹಾಕಿತು. ಮತ್ತೊಂದೆಡೆ ಮನೋಜ್ ಭಾಂಡಗೆ (28) ಮತ್ತು ಜೆ ಸುಚಿತ್ (31) ತಂಡಕ್ಕೆ ಆಸರೆಯಾದರು. ಮೈಸೂರು ವಾರಿಯರ್ಸ್ 20 ಓವರ್‌ಗಳಲ್ಲಿ 185 ರನ್‌ ಕೆಲೆಹಾಕುವ ಮೂಲಕ ಬೆಂಗಳೂರಿಗೆ ಸ್ಪರ್ಧಾತ್ಮಕ ಮೊತ್ತವನ್ನು ನೀಡಿತು

ಬೆಂಗಳೂರು ಪರ ಶುಭಾಂಗ್ ಹೆಗ್ಡೆ (4/23) ಮತ್ತು ರಿಶಿ ಬೋಪಣ್ಣ (2/19) ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು.

ಮೈಸೂರು ನೀಡಿದ 185 ರನ್‌ ಬೆನ್ನತ್ತಿದ ಬೆಂಗಳೂರು ನಾಯಕ ಮಯಾಂಕ್ ಅಗರ್ವಾಲ್ (2) ಬೇಗನೆ ಕಳೆದುಕೊಂಡಿತು. ಸೂರಜ್ ಅಹುಜಾ ಕೇವಲ 20 ಎಸೆತಗಳಲ್ಲಿ 31 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಬೇರಾರಿಂದಲೂ ನಿರೀಕ್ಷಿತ ಆಟ ಕಂಡು ಬರಲಿಲ್ಲ.

ಬೆಂಗಳೂರು 11.1 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 85 ರನ್‌ಗಳಿ ಸಂಕಷ್ಟಕ್ಕೆ ಸಿಲುಕಿತ್ತು. ಇದೇ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಮಳೆಯಿಂದಾಗಿ ಪಂದ್ಯ ರದ್ದಾಯಿತು, ವಿಜೆಡಿ ನಿಯಮದಡಿ ವಾರಿಯರ್ಸ್ 33 ರನ್‌ಗಳಿಂದ ಜಯ ಸಿಕ್ಕಿತು.

ಸಂಕ್ಷಿಪ್ತ ಸ್ಕೋರ್‌ :

ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 185/7  ಸಿಎ ಕಾರ್ತಿಕ್ 62(43), ಜಗದೀಶ ಸುಚಿತ್ 31*( 14), ಮನೋಜ್ ಭಾಂಡಗೆ 28(12) ಶುಭಾಂಗ್ ಹೆಗ್ಡೆ 4/23, ರಿಷಿ ಬೋಪಣ್ಣ 2/19, ಕುಮಾರ್ ಎಲ್ ಆರ್ 1/62

ಬೆಂಗಳೂರು ಬ್ಲಾಸ್ಟರ್ಸ್‌ : 11.1 ಓವರ್‌ಗಳಲ್ಲಿ 85/5, ಜಸ್ವಂತ್‌ ಆಚಾರ್ಯ 19(22), ಶುಭಾಂಗ್‌ ಹೆಗ್ಡೆ 13(8), ಸೂರಜ್‌ ಅಹುಜಾ 31(20), ಅಜಿತ್‌ ಕಾರ್ತಿಕ್‌ 2/16, ಜೆ ಸುಚಿತ್‌ 2/8, ಶ್ರೀಶಾ ಆಚಾರ್‌ 1/20

ಪಂದ್ಯ ಶ್ರೇಷ್ಠ : ಸಿಎ ಕಾರ್ತಿಕ್‌

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ