ಮೈಸೂರು: ಇದೇ ಆಗಸ್ಟ್ 15 ರಿಂದ ಸೆಪ್ಟೆಂಬರ್ 1 ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿ ಪಂದ್ಯಾವಳಿ ಆರಂಭಕ್ಕೂ ಮುನ್ನಾ ಮೈಸೂರು ವಾರಿಯರ್ಸ್ ತಂಡ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದರು.
ಬುಧವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಮೈಸೂರು ವಾರಿಯರ್ಸ್ ತಂಡದ ಮಾಲೀಕರು ಮತ್ತು ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ರಂಗಾ, ಮೈಸೂರು ವಾರಿಯರ್ಸ್ ತಂಡದ ಕರುಣ್ ನಾಯರ್, ಸುಚಿತ್ ಜೆ, ಗೌತಮ್ ಕೆ, ಮನೋಜ್ ಭಾಂಡಗೆ, ಪ್ರಸಿದ್ಧ್ ಕೃಷ್ಣ, ಸಿ ಎ ಕಾರ್ತಿಕ್, ವೆಂಕಟೇಶ್ ಎಂ, ವಿದ್ಯಾಧರ್ ಪಾಟೀಲ್ ಮತ್ತು ಧನುಷ್ ಗೌಡ ಸೇರಿದಂತೆ ತಂಡದ 13 ಆಟಗಾರು ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದು ಮಹಾರಾಜ ಟ್ರೋಫಿ ಪಂದ್ಯಾವಳಿಗಾಗಿ ತರಬೇತಿಗೆ ಚಾಲನೆ ನೀಡಿದರು.
ದೇಗುಲದಲ್ಲಿ 6 ಅಡಿ ಎತ್ತರದ ಅಖಂಡ ಜ್ಯೋತಿಯನ್ನು ಬೆಳಗಿಸಿದ ಮೈಸೂರು ವಾರಿಯರ್ಸ್ ತಂಡ ದೇವಿಯ ಆಶೀರ್ವಾದವನ್ನು ಪಡೆದರು.





