Mysore
18
clear sky

Social Media

ಬುಧವಾರ, 17 ಡಿಸೆಂಬರ್ 2025
Light
Dark

ಮಹಾರಾಜ ಟ್ರೋಫಿ 2024: ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಸಮರಾಭ್ಯಾಸ ಆರಂಭಿಸಿದ ಮೈಸೂರು ವಾರಿಯರ್ಸ್‌

ಮೈಸೂರು: ಮಹಾರಾಜ ಟ್ರೋಫಿ (ಕೆಎಸ್‌ಸಿಎ) ಟಿ20 2024ರ ಪಂದ್ಯಾವಳಿಗೆ ಎಲ್ಲಾ ಸಿದ್ದತೆಗಳು ಭರದಿಂದ ಸಾಗುತ್ತಿವೆ. ಇದೇ ಆಗಸ್ಟ್‌ 15 ರಿಂದ ಆರಂಭವಾಗಲಿರುವ ಮಹಾರಾಜ ಟ್ರೋಫಿ 2024ರ ಪಂದ್ಯಾವಳಿ ಆರಂಭಕ್ಕೂ ಮುನ್ನಾ ಇಂದು (ಶುಕ್ರವಾರ, ಆ.1) ನಗರದ ಮಾನಸ ಗಂಗೋತ್ರಿಯಲ್ಲಿನ ಗ್ಲೇಡ್ಸ್‌ ಮೈದಾನದಲ್ಲಿ ಮೈಸೂರು ವಾರಿಯರ್ಸ್‌ ತಂಡ ತನ್ನ ಅಭ್ಯಾಸ ಆರಂಭಿಸಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಸ್ಟ್‌ 15 ರಿಂದ ಸೆಪ್ಟೆಂಬರ್ 1 ವರೆಗೆ ಈ ಟೂರ್ನಿ ನಡೆಯಲಿದ್ದು, ಇದಕ್ಕಾಗಿ ಮೈಸೂರಿನಲ್ಲಿ ಸಮರಭ್ಯಾಸ ನಡೆಸುತ್ತಿದ್ದಾರೆ.

ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ಅಭ್ಯಾಸ ನಡೆಸಿದ ವಾರಿಯರ್ಸ್‌ ತಂಡ ಹೆಡ್‌ ಕೋಚ್‌ ಅನುಪಸ್ಥಿತಿಯಲ್ಲಿ ಅಭ್ಯಾಸ ನಡೆಸಿದ್ದಾರೆ. ಇನ್ನು ಅನುಭವಿ ಆಲ್‌ ರೌಂಡರ್‌ ಗೌತಮ್‌, ರಾಹುಲ್‌ ದ್ರಾವಿಡ್‌ ಪುತ್ರ ಸಮಿತ್‌ ದ್ರಾವಿಡ್‌ ಕಾರಣಾಂತರಗಳಿಂದ ಅಭ್ಯಾಸಕ್ಕೆ ಆಗಮಿಸಿಲ್ಲ.

ಈ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡವು ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾನ್ಸರ್ನ್, ಮಂಗಳೂರು ಡ್ರಾಗನ್ಸ್, ಗುಲ್ಬರ್ಗಾ ಮಿಸ್ಟಿಕ್ಸ್, ಮತ್ತು ಶಿವಮೊಗ್ಗ ಲಯನ್ಸ್ ಸೇರಿದಂತೆ ಐದು ತಂಡಗಳ ವಿರುದ್ಧ ಆಡಲಿದೆ.

ಮೈಸೂರು ವಾರಿಯರ್ಸ್ ತಂಡದ ಅಟಗಾರರ ಹೆಸರುಗಳು ಹೀಗಿವೆ:

1. ಕಾರ್ತಿಕ್.ಸಿ ಅಜಿತ್
2. ಕಾರ್ತಿಕ್.ಎಸ್.ಯು
3. ಕರುಣ್ ನಾಯರ್
4. ಸಮಿತ್ ದ್ರಾವಿಡ್
5. ಹರ್ಷಿಲ್‌ ಧರ್ಮನಿ
6. ಮನೋಜ್ ಭಾಂಡಗೆ
7. ಜಗದೀಶ ಸುಚಿತ್
8. ಗೌತಮ ಕೃಷ್ಣಪ್ಪ
9. ವಿದ್ಯಾಧರ ಪಾಟೀಲ
10. ವೆಂಕಟೇಶ ಎಂ
11. ಗೌತಮ ಮಿಶ್ರಾ
12. ಧನುಷ್ಯ ಗೌಡ
13. ದೀಪಕ್ ದೇವಾಡಿಗ
14. ಸುಮಿತ್ ಕುಮಾರ್
15. ಸ್ಮಯನ್ ಶ್ರೀವಾಸ್ತವ
16. ಜಾಸ್ಪರ್ ಇ ಜಿ
17. ಸರ್ಫರಾಜ್ ಅಶ್ರಫ್
18. ಪ್ರಸಿದ್ಧ ಕೃಷ್ಣ

Tags:
error: Content is protected !!