ಬೆಂಗಳೂರು: ಪ್ರತಿಷ್ಠಿತ ಮಹಾರಾಜ ಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡ ಹುಬ್ಬಳ್ಳಿ ಟೈಗರ್ಸ್ ತಂಡವನ್ನು 9 ರನ್‌ಗಳಿಂದ ಸೋಲಿಸುವ ಮೂಲಕ ಮೈಸೂರು ತಂಡ ಫೈನಲ್ ಪ್ರವೇಶಿಸಿದೆ. ಈ ಮೂಲಕ ಈಗಾಗಲೇ ಫೈನಲ್ ಪ್ರವೇಶ ಪಡೆದಿರುವ ಬೆಂಗಳೂರು ತಂಡವನ್ನು ನಾಳೆ ಎದುರಿಸಲಿದೆ.
ಇಂದು ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮೈಸೂರು ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿತು. ಮೈಸೂರು ತಂಡದ ಪರ ಆಕರ್ಷಕ ಬ್ಯಾಟಿಂಗ್ ನಡೆಸಿದ ಆರಂಭಿಕ ಆಟಗಾರ ಎಸ್.ಯು ಕಾರ್ತಿಕ್ 53 ರನ್ ಗಳಿಸಿದರು. ಮಧ್ಯಮ ಕ್ರಮಾಂಕದ ಆಟಗಾರ ಶ್ರೀನಿವಾಸ್ ಶರತ್, ಸುಮಿತ್ ಗಳಿಸುವ ಮೂಲಕ ತಂಡದ ಮೊತ್ತವನ್ನು 177ಕ್ಕೆ ತಲುಪಿಸಿದರು. ಇನ್ನು ಹುಬ್ಳಿ ಪರವಾಗಿ ಕುಮಾರ್ 3, ವಿದ್ವತ್ ಕಾವೇರಪ್ಪ 2 ಮತ್ತು ನಿಶ್ಚಿಂತ್ ಪೈ ಹಾಗೂ ಕಾರಿಯಪ್ಪ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಸೆಪ್ಟೆಂಬರ್.1ರಂದು ಚಿನ್ನಸ್ವಾಮಿ ಮೈದಾನದಲ್ಲಿ ಫೈನಲ್ ಪಂದ್ಯ ಆಯೋಜಿಸಲಾಗಿದೆ. ಈ ಫೈನಲ್ ಪಂದ್ಯದಲ್ಲಿ ಟೂರ್ನಿಯ 2 ಬಲಿಷ್ಠ ತಂಡಗಳಾದ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ವಿಜಯಲಕ್ಷ್ಮಿ ಯಾವ ತಂಡದ ಪಾಲಾಗಳಿದ್ದಾಳೆ ಎಂಬುದನ್ನು ಕಾದುನೋಡಬೇಕಿದೆ.