Mysore
20
overcast clouds
Light
Dark

ಮಹಾರಾಜ ಟ್ರೋಫಿ: 2024: ಮೈಸೂರು ವಾರಿಯರ್ಸ್ ತಂಡ ಪ್ರಕಟ

ಬೆಂಗಳೂರು: ಮಹಾರಾಜ ಟ್ರೋಫಿ (ಕೆಎಸ್‌ಸಿಎ) ಟಿ20 2024ರ ಪಂದ್ಯಾವಳಿಯಲ್ಲಿ ಆಡಲಿರುವ ಆಟಗಾರರ ಪಟ್ಟಿಯನ್ನು ಮೈಸೂರು ವಾರಿಯರ್ಸ್ ತಂಡ ಪ್ರಕಟಿಸಿದೆ. ಭಾರತದ ಪ್ರಮುಖ ಅಗರಬತ್ತಿ ತಯಾರಕರು ಮತ್ತು ಮೈಸೂರು ವಾರಿಯರ್ನನ ಮಾಲೀಕರಾಗಿರುವ ಎನ್‌ಆರ್ ಗ್ರೂಪ್, ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2024ರಲ್ಲಿ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಅಡಲು 18 ಅಟಗಾರರ ಜೊತೆ ಒಪ್ಪಂದ ಮಾಡಿಕೊಂಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಗುರುವಾರ (ಜು.25 ನಡೆದ ಹರಾಜು ಪ್ರಕ್ರಿಯೆಯಲ್ಲಿ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಈ ಆಟಗಾರರರು ಆಗಸ್ಟ್ 15 ರಿಂದ ಸೆಪ್ಟೆಂಬರ್ ರವರೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿಯ ಮೂರನೇ ಆವೃತ್ತಿಯಲ್ಲಿ ಮೈಸೂರು ತಂಡದ ಪರವಾಗಿ ಆಡಲಿದ್ದಾರೆ.

ಹರಾಜು ಪ್ರಕ್ರಿಯೆ ಬಳಿಕ ಮಾತನಾಡಿದ ಮೈಸೂರು ವಾರಿಯರ್ಸ್‌ ಮಾಲೀಕ ಅರ್ಜುನ್ ರಂಗ, “ಮಹಾರಾಜ ಟ್ರೋಫಿಯ ಮೂರನೇ ಆವೃತ್ತಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಆಡಲು ರಾಜ್ಯದ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿರುವುದು ನಮಗೆ ಖುಷಿ ಕೊಟ್ಟಿದೆ. ಈ ವರ್ಷ ನಾವು ಪ್ರಶಸ್ತಿ ಗೆಲ್ಲುವ ನಂಬಿಕೆ ಇದೆ” ಎಂದು ಹೇಳಿದರು.

ಮೈಸೂರು ವಾರಿಯರ್ಸ್‌ ಮಾಲೀಕರು ಮತ್ತು ರಂಗ ಸನ್ಸ್ ಏರೋಸ್ಪೇಸ್‌ ಸಿಇಓ ಶ್ರೀ ಪವನ್ ರಂಗ ಮಾತನಾಡಿ, “ಆಯ್ಕೆಗೊಂಡಿರುವ ಆಟಗಾರರು ಎನ್‌ಆರ್ ಗ್ರೂಪ್ ಅಧೀನದ ಮೈಸೂರು ವಾರಿಯರ್ಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲಿದ್ದಾರೆ ಎಂಬ ಭರವಸೆ ನಮಗಿದೆ” ಎಂದು ಹೇಳಿದರು.

ಈ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡವು ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾನ್ಸರ್ನ್, ಮಂಗಳೂರು ಡ್ರಾಗನ್ಸ್, ಗುಲ್ಬರ್ಗಾ ಮಿಸ್ಟಿಕ್ಸ್, ಮತ್ತು ಶಿವಮೊಗ್ಗ ಲಯನ್ಸ್ ಸೇರಿದಂತೆ ಐದು ತಂಡಗಳ ವಿರುದ್ಧ ಆಡಲಿದೆ.

ಮೈಸೂರು ವಾರಿಯರ್ಸ್ ತಂಡದ ಅಟಗಾರರ ಹೆಸರುಗಳು ಹೀಗಿವೆ:
ಕ್ರಮ ಸಂಖ್ಯೆ

ಮೈಸೂರು ವಾರಿಯರ್ಸ್

1. ಕಾರ್ತಿಕ್.ಸಿ ಅಜಿತ್
2. ಕಾರ್ತಿಕ್.ಎಸ್.ಯು
3. ಕರುಣ್ ನಾಯರ್
4. ಸಮಿತ್ ದ್ರಾವಿಡ್
5. ಹರ್ಷಿಲ್‌ ಧರ್ಮನಿ
6. ಮನೋಜ್ ಭಾಂಡಗೆ
7. ಜಗದೀಶ ಸುಚಿತ್
8. ಗೌತಮ ಕೃಷ್ಣಪ್ಪ
9. ವಿದ್ಯಾಧರ ಪಾಟೀಲ
10. ವೆಂಕಟೇಶ ಎಂ
11. ಗೌತಮ ಮಿಶ್ರಾ
12. ಧನುಷ್ಯ ಗೌಡ
13. ದೀಪಕ್ ದೇವಾಡಿಗ
14. ಸುಮಿತ್ ಕುಮಾರ್
15. ಸ್ಮಯನ್ ಶ್ರೀವಾಸ್ತವ
16. ಜಾಸ್ಪರ್ ಇ ಜಿ
17. ಸರ್ಫರಾಜ್ ಅಶ್ರಫ್
18. ಪ್ರಸಿದ್ಧ ಕೃಷ್ಣ