Mysore
26
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಹುಬ್ಬಳ್ಳಿ ಟೈಗರ್ಸ್ ಗೆಲುವಿನ ಓಟಕ್ಕೆ ಮೈಸೂರು ಲಗಾಮು: ಕರುಣ್ ಪಡೆಗೆ ಸತತ ನಾಲ್ಕನೇ ಗೆಲುವು

ಬೆಂಗಳೂರು : ಮೈಸೂರು ವಾರಿಯರ್ಸ್‌ ತಂಡವು ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಸೋಲಿಸುವ ಮೂಲಕ ಹುಬ್ಬಳ್ಳಿ ಅಜೇಯ ಓಟಕ್ಕೆ ಲಗಾಮು ಹಾಕಿದೆ. ಜತೆಗೆ ಸತತ ನಾಲ್ಕನೇ ಗೆಲುವು ಸಾಧಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟ್ ವಾಡಿದ ಹುಬ್ಬಳ್ಳಿ ಟೈಗರ್ಸ್ ತಂಡವು ಆರಂಭಿಕ ದಾಂಡಿಗ ಲುವ್ನಿತ್ ಸಿಸೋಡಿಯಾ (೬೩ ಎಸೆತಗಳಲ್ಲಿ ೧೦೫ ರನ್) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ನಿಗದಿತ ೨೦ ಓವರ್‌ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೧೮೫ ರನ್ ಕಲೆಹಾಕಿತು. ಬೃಹತ್ ಮೊತ್ತ ಬೆನ್ನತ್ತಿದ ಮೈಸೂರು ವಾರಿಯರ್ಸ್, ಆರಂಭಿಕ ಬ್ಯಾಟರ್ ಆರ್.ಸಮರ್ಥ್ ಅವರ ಸಮರ್ಥ ಆಟದೊಂದಿಗೆ ೭ ಎಸೆತಗಳು ಬಾಕಿ ಇರುವಂತೆಯೇ ೬ ವಿಕೆಟ್‌ಗಳ ಜಯ ದಾಖಲಿಸಿತು.

ಹುಬ್ಬಳ್ಳಿ ಪರ ಆರಂಬಿಕ ದಾಂಡಿಗ ಸಿಸೋಡಿಯಾ ಶತಕಕ್ಕೆ ನಾಯಕ ಮನೀಶ್ ಪಾಂಡೆ ೩೩(೨೧) ಸಾಥ್ ನೀಡಿದರು. ಪ್ರವೀಣ್ ದುಬೆ ೧೬(೬), ನಾಗ ಭರತ್ ೧೨(೧೭) ಆಟದಿಂದ ತಂಡವು ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ವಾರಿಯರ್ಸ್‌ನ ಸಿಎ ಕಾರ್ತಿಕ್ ೪ ಓವರ್ ಬೌಲಿಂಗ್ ವಾಡಿ ೫೦ ರನ್ ನೀಡಿ ಪ್ರಮುಖ ೪ ವಿಕೆಟ್ ಕಬಳಿಸಿದರು. ಶಶಿಕುವಾರ್, ಮನೋಜ್ ಬಾಂಗಡೆ ತಲಾ ೧ ವಿಕೆಟ್ ಪಡೆದರು.

ಬೃಹತ್ ಮೊತ್ತ ಚೇಸ್ ವಾಡಿದ ವಾರಿಯರ್ಸ್‌ಗೆ ಆರಂಭಿಕ ದಾಂಡಿಗ ಆರ್.ಸಮರ್ಥ್ ಉತ್ತಮ ಆರಂಭ ಒದಗಿಸಿದರು, ೪೨ ಎಸೆತಗಳಲ್ಲಿ ೩ ಸಿಕ್ಸರ್ ಮತ್ತು ೬ ಬೌಂಡರಿ ಮೂಲಕ ೭೩ ರನ್ ಕಲೆಹಾಕಿ ತಂಡದ ಗೆಲುವಿಗೆ ಕಾರಣರಾದರು. ನಾುಂಕ ಕರುಣ್ ನಾುಂರ್ ೪೧(೨೫) ಉತ್ತಮ ಇನ್ನಿಂಗ್ಸ್ ಕಟ್ಟಿದರು. ಅಂತಿಮ ಐದು ಓವರ್‌ಗಳಲ್ಲಿ ೪೨ ರನ್‌ಗಳ ಅಗತ್ಯವಿದ್ದಾಗ, ಶೋಯಬ್ ವ್ಯಾನೇಜರ್ (೨೧*) ಮತ್ತು ಶಿವಕುವಾರ್ ರಕ್ಷಿತ್ (೨೨*) ಅವರ ಜೊತೆಯಾಟದಿಂದ ೧೮.೫ ಓವರ್‌ಗಳಲ್ಲಿ ಆರು ವಿಕೆಟ್‌ಗಳು ಬಾಕಿ ಇರುವಂತೆಯೇ ತಂಡ ಜಯದ ಮಂದಹಾಸ ಬೀರಿತು.

ಸಂಕ್ಷಿಪ್ತ ಸ್ಕೋರ್ :

ಹುಬ್ಬಳ್ಳಿ ಟೈಗರ್ಸ್ : ೨೦ ಓವರ್‌ಗಳಲ್ಲಿ ೧೮೫-೭: ಲುವಿನಿತ್ ಸಿಸೋಡಿಯಾ ೧೦೫(೬೩), ಮನೀಶ್ ಪಾಂಡೆ ೩೩(೨೧), ಪ್ರವೀಣ್ ದುಬೆ೧೬(೬) ಸಿಎ ಕಾರ್ತಿಕ್ ೪-೫೦, ಶಶಿಕುವಾರ್ ೧-೨೫, ಮನೋಜ್ ಭಾಂಡಗೆ ೧-೨೮

ಮೈಸೂರು ವಾರಿಯರ್ಸ್ : ೧೮.೫ ಓವರ್‌ಗಳಲ್ಲಿ ೧೮೮-೪: ಆರ್. ಸಮರ್ಥ್ ೭೩(೪೨), ಕರುಣ್ ನಾಯರ್ ೪೧(೨೫), ಸಿಎ ಕಾರ್ತಿಕ್ ೨೯(೧೮) ಪ್ರವೀಣ್ ದುಬೆ ೩-೩೮.

ಪಂದ್ಯಶ್ರೇಷ್ಠ : ಆರ್. ಸಮರ್ಥ್

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!