Mysore
19
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಟೀಂ ಇಂಡಿಯಾ ಬೌಲಿಂಗ್‌ ಕೋಚ್‌ ಆಗಿ ನೇಮಕಗೊಂಡ ಸೌತ್‌ ಆಫ್ರಿಕಾ ವೇಗಿ!

ನವದೆಹಲಿ: ಭಾರತ ತಂಡದ ನೂತನ ಬೌಲಿಂಗ್‌ ಕೋಚ್‌ ಆಗಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ವೇಗಿ ಮಾರ್ನೆ ಮಾರ್ಕೆಲ್‌ ಅವರು ನೇಮಕಗೊಂಡಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಎಲ್‌ಎಸ್‌ಜಿ (ಲಖನೌ ಸೂಪರ್‌ ಜೈಂಟ್ಸ್‌) ತಂಡದಲ್ಲಿ ಗೌತಮ್‌ ಗಂಭೀರ್‌ ಜೊತೆ ಇದ್ದ ಈ ಬೌಲರ್‌ ಅನ್ನು ಟೀಂ ಇಂಡಿಯಾ ಹೆಡ್‌ ಕೋಚ್‌ ಗಂಭೀರ್‌ ಸಲಹೆ ಮೇರೆಗೆ ಭಾರತ ತಂಡದ ನೂತನ ಬೌಲಿಂಗ್‌ ಕೋಚ್‌ ಆಗಿ ನೇಮಿಸಲಾಗಿದೆ ಎಂದು ಹೇಳಲಾಗುತ್ತಿದೆ.

2023ರ ವಿಶ್ವಕಪ್‌ ಸಮಯದಲ್ಲಿ ಪಾಕಿಸ್ತಾನ ತಂಡದ ಬೌಲಿಂಗ್‌ ಕೋಚ್‌ ಆಗಿ ಇವರು ಕಾರ್ಯ ನಿರ್ವಹಿಸಿದ್ದರು.

39 ವರ್ಷದ ಮಾರ್ಕೆಲ್‌ ಅವರು ಈ ಹಿಂದೆ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌, ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡಗಳ ಪರವಾಗಿ ಆಡಿದ್ದರು. ಮತ್ತು ದಕ್ಷಿಣಾ ಆಫ್ರಿಕಾ ತಂಡದ ಪರವಾಗಿ 86 ಟೆಸ್ಟ್‌, 117 ಏಕದಿನ ಹಾಗೂ 44 ಟಿ20 ಪಂದ್ಯಗಳಿಂದ ಒಟ್ಟಾರೆಯಾಗಿ 544 ವಿಕೆಟ್‌ಗಳನ್ನು ಪಡೆದಿದ್ದಾರೆ.

Tags:
error: Content is protected !!