ಪ್ಯಾರಿಸ್: ಪ್ರಸಕ್ತ ಒಲಂಪಿಕ್ಸ್‌ನಲ್ಲಿ ಭಾರತ ತನ್ನ ಮೊದಲ ಪದಕಕ್ಕೆ ಮುತ್ತಿಕ್ಕಿದೆ. ಮಹಿಳಾ ವಿಭಾಗದ 10 ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ತಾರೆ ಮನು ಭಾಕರ್ ಅವರು ದೇಶಕ್ಕೆ ಮೊದಲ ಪದಕವನ್ನು ಜಯಿಸಿಕೊಟ್ಟಿದ್ದಾರೆ.
ಆ ಮೂಲಕ ಒಲಂಪಿಕ್ಸ್‌ನ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಮೊದಲ ಮಹಿಳೆ ಎಂಬ ಕೀರ್ತಿಗೆ 22 ವರ್ಷದ ಮನು ಭಾಕರ್ ಪಾತ್ರರಾಗಿದ್ದಾರೆ.
ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ 2024ರ ಒಲಂಪಿಕ್ಸ್‌ನಲ್ಲಿ ಭಾರತ ತನ್ನ ಖಾತೆ ತೆರದಿದೆ.
ರಿಪಬ್ಲಿಕ್ ಆಫ್ ಕೊರಿಯಾದ ಓ ಯೆ ಜಿನ್ 243.2 ಅಂಕ ಗಳಿಸಿ ಚಿನ್ನಕ್ಕೆ ಮುತ್ತಿಟ್ಟರೆ, 241.3 ಅಂಕ ಗಳಿಸಿದ ಕಮ್ ಯೆಜಿ ಬೆಳ್ಳಿ ಗೆದ್ದರು. ಇನ್ನು 221.7 ಅಂಕ ಗಳಿಸಿದ ಮನು ಭಾಕರ್ ಅವರು ಕಂಚಿಗೆ ತೃಪ್ತಿಪಟ್ಟುಕೊಂಡರು.
ಮನು ಭಾಕರ್ ಅವರು ಈ ಪ್ರಶಸ್ತಿ ಗೆಲ್ಲುವ ಮೂಲಕ ಹನ್ನೆರೆಡು ವರ್ಷಗಳ ಬಳಿಕ ಭಾರತಕ್ಕೆ ಏರ್ ಪಿಸ್ತೂಲ್ ವಿಭಾಗದಲ್ಲಿ ಮೊಲದ ಪದಕ ಗೆದ್ದ ಕೀರ್ತಿಗೆ ಪಾತ್ರರಾದರು.





