ಪ್ಯಾರಿಸ್: ಸತತ ಎರಡು ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದ ಮನು ಭಾಕರ್ ಅವರು ಮೂರನೇ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಆಗಿದ್ದರೂ ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ವಿನೂತನ ದಾಖಲೆಯೊಂದನ್ನು ಬರೆದಿದ್ದಾರೆ.
25 ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ತಮ್ಮ ಅಭಿಯಾನವನ್ನು ಅಂತ್ಯಗೊಳಿಸಿದ್ದಾರೆ. ಈ ಹಿಂದೆ ಇದೇ ಒಲಂಪಿಕ್ಸ್‌ನಲ್ಲಿ 10 ಮೀ. ಏರ್ ಪಿಸ್ತೂಲ್ ಹಾಗೂ 10 ಮೀ. ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲಿ ಕ್ರಮವಾಗಿ ಕಂಚಿನ ಪದಕ ಗೆಲ್ಲುವ ಮೂಲಕ ನೂತನ ಸಾಧನೆ ಮಾಡಿದ್ದರು. ಆದರೆ ಮೂರನೇ ಪದಕ ಜಯಿಸುವಲ್ಲಿ ಮನು ಭಾಕರ್ ಅವರು ವಿಫಲರಾಗಿದ್ದಾರೆ.
ಮನು ಭಾಕರ್ ಪದಕ ಸುತ್ತಿನಲ್ಲಿ ಕೇವಲ 28 ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದರು. ದ. ಕೊರಿಯಾದ ಜಿ ಯಾಂಗ್ ಅವರು 37 ಅಂಕಗಳನ್ನು ಪಡೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಫ್ರಾನ್ಸ್‌ನ ಕ್ಯಾಮಿಲೆ 37 ಅಂಕ ಗಳಿಸಿ ಬೆಳ್ಳಿ ಪದಕ ಪಡೆದರು. ಇನ್ನು ಹಂಗೇರಿಯಾ ವೆರೋನಿಕಾ 31 ಅಂಕ ಗಳಿಸಿ ಕಂಚಿನ ಪದಕ ಗೆದ್ದರು. ಮನು ಭಾಕರ್ ನಾಲ್ಕನೆಯವರಾಗಿ ಹೊರ ನಡೆದರು.
ಇನ್ನು ಈ ಬಾರಿಯ ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ಸತತ ಎರಡು ಮೆಡಲ್ ಗೆಲ್ಲುವ ಮೂಲಕ ಶೂಟಿಂಗ್‌ನಲ್ಲಿ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಮನು ಭಾಕರ್ ಬರೆದರು.