Mysore
24
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

Paris Olympics 2024: ಏರ್‌ ಪಿಸ್ತೂಲ್‌ನಲ್ಲಿ ಫೈನಲ್‌ ಪ್ರವೇಶಿಸಿದ ಮನು ಭಾಕರ್‌

ಪ್ಯಾರಿಸ್‌: ವಿಶ್ವ ವಿಖ್ಯಾತ ಕ್ರೀಡಾಕೂಟ ಪ್ಯಾರೀಸ್‌ ಒಲಂಪಿಕ್ಸ್‌ 2024ರಲ್ಲಿ ಭಾರತ ಶುಭಾರಂಭ ಮಾಡಿದೆ. ಭಾರತದ ಶೂಟರ್‌ ಮನು ಭಾಕರ್‌ ಅವರು ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಫೈನಲ್‌ ತಲುಪುವ ಮೂಲಕ ಭಾರತಕ್ಕೆ ಮೊದಲ ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ.

ಮನು ಅರ್ಹತಾ ಸ್ಪರ್ಧೆಯಲ್ಲಿ ಒಟ್ಟು 45 ಜನ ಸ್ಪರ್ಧಾಳುಗಳು ಭಾಗವಹಿಸಿದ್ದರು. ಇದರಲ್ಲಿ ಮನು 600 ಅಂಕಗಳಿಗೆ 580 ಅಂಕಗಳಿಸಿ 3ನೇ ಸ್ಥಾನ ಪಡೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದರು. ಇದೇ ವಿಭಾಗದಲ್ಲಿ ಭಾಗವಹಿಸಿದ್ದ ಭಾರತದ ಮತ್ತೊಬ್ಬ ಸ್ಪರ್ಧಿ ರಿದಮ್‌ ಸಾಂಗ್ವಾನ್‌ 15ನೇ ಸ್ಥಾನ ಪಡೆದು ನಿರಾಸೆ ಮೂಡಿಸಿ ಟೂರ್ನಿಯಿಂದ ಹೊರನಡೆದರು.

Tags: