ಲಖನೌ: ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡದ ಯಶ್ ಠಾಕೂರ್ 30ಕ್ಕೆ5, ಕೃನಾಲ್ ಪಾಂಡ್ಯ 11ಕ್ಕೆ3 ನಡೆಸಿದ ಮಿಂಚಿನ ಬೌಲಿಂಗ್ ದಾಳಿಗೆ ನಲುಗಿದ ಗುಜರಾತ್ ಟೈಟನ್ಸ್ 33 ರನ್‌ಗಳ ಅಂತರದ ಸೋಲು ಅನುಭವಿಸಿದೆ.
ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಲಖನೌ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಲಖನೌ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 163 ರನ್ ಪೇರಿಸಿತು. ಈ ಮೊತ್ತ ಬೆನ್ನತ್ತಿದ ಗುಜರಾತ್ 18.5 ಓವರ್‌ಗಳಲ್ಲಿ ಆಲ್‌ಔಟ್ ಆಗುವ ಮೂಲಕ ಕೇವಲ 130 ಕೆಲಹಾಕಿ ಸೋಲೊಪ್ಪಿಕೊಂಡಿತು.
ಲಖನೌ ಇನ್ನಿಂಗ್ಸ್: ಇಂದಿನ ಪಂದ್ಯದಲ್ಲಿಯೂ ಸಹಾ ಲಖನೌಗೆ ಉತ್ತರ ಆರಂಭ ಸಿಗಲಿಲ್ಲ. ಡಿ ಕಾಕ್ 6ಕ್ಕೆ ಸುಸ್ತಾದರು. ಬಳಿಕ ಬಂದ ಪಡಿಕ್ಕಲ್ 7 ರನ್ ಬಾರಿಸಿ ಔಟಾದರು. ನಂತರ ಒಂದಾದ ನಾಯಕರ ರಾಹುಲ್ 33, ಹಾಗೂ ಸ್ಟೋಯಿನ್ಸ್ 58 ರನ್ ಗಳಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ಯಶಸ್ವಿಯಾದರು. ಉಳಿದಂತೆ ಪೂರನ್ 32, ಬದೋನಿ 20 ರನ್ ಗಳಿಸಿದರು.
ಗುಜರಾತ್ ಟೈಟನ್ಸ್ ಪರ ಉಮೇಶ್ ಯಾದವ್, ದರ್ಶನ್ ತಲಾ 2 ವಿಕೆಟ್ ಹಾಗೂ ರಶಿದ್ ಖಾನ್ ಒಂದು ವಿಕೆಟ್ ಪಡೆದರು.
ಗುಜರಾತ್ ಇನ್ನಿಂಗ್ಸ್: ಉತ್ತಮ ಆರಂಭ ಪಡೆದ ಗುಜರಾತ್‌ಗೆ ಮಧ್ಯಮ ಕ್ರಮಾಂಕ ಕೈ ಕೊಟ್ಟಿತು. ಜಿಟಿ ಪರ ಸಾಯ್ ಸುದರ್ಶನ್ 31 ರನ್ ಗಳಿಸಿದೇ ತಂಡದ ಪರ ಗರಿಷ್ಠ ಮೊತ್ತವಾಗಿತ್ತು. ಇವರಿಗೆ ನಾಯಕ ನಾಯಕ ಗಿಲ್ 19ರನ್ ಬಾರಿಸಿ ಸಾಥ್ ನೀಡಿದರು. ಈ ಇಬ್ಬರೂ ನಿರ್ಗಮಿಸಿದ ಬಳಿಕ ಮಧ್ಯಮ ಕ್ರಮಾಕ ದಿಢೀರ್ ಕುಸಿತ ಕಂಡಿತು. ಕೇನ್ ವಿಲಿಯಮ್ಸ್ 1, ಶರತ್ 2, ವಿಜಯ್ ಶಂಕರ್ 17, ನಲ್ಕಂಡೆ 12, ರಶೀದ್ ಖಾನ್ ಸೊನ್ನೆ ಸುತ್ತಿದರು. ತೆವಾಟಿಯಾ 30ರನ್ ಬಾರಿಸಿ ಕೊನೆಯಲ್ಲಿ ಕೊಂಚ ಹೋರಾಟ ತೋರಿದರೂ ಗೆಲ್ಲಲ್ಲು ಸಾಧ್ಯವಾಗಲಿಲ್ಲ.
ಲಖನೌ ಪರ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಯಶ್ ಠಾಕೂರ್ 30ಕ್ಕೆ5, ಕೃನಾಲ್ ಪಾಂಡ್ಯ 11ಕ್ಕೆ3, ನವೀನ್ ಉಲ್-ಹಕ್ ಹಾಗೂ ಬಿಷ್ಣೋಯಿ ತಲಾ ಒಂದು ವಿಕೆಟ್ ಪಡೆದರು.
ಪಂದ್ಯ ಶ್ರೇಷ್ಠ: ಯಶ್ ಠಾಕೂರ್