Mysore
14
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಲೋಕಸಭಾ ಚುನಾವಣೆ 2024: ʼಮಹಾʼದಲ್ಲಿ ಮತದಾನ ಮಾಡಿದ ಕ್ರಿಕೇಟಿಗರಿವರು

ಇಂದು ದೇಶಾದ್ಯಂತ ಐದನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. 6 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 49 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಇದರಲ್ಲಿ ಮಹಾರಾಷ್ಟ್ರದ 13 ಕ್ಷೇತ್ರಗಳಿಗೂ ಇಂದೇ ಮತದಾನ ನಡೆಯುತ್ತಿದೆ.

ಮಹಾರಾಷ್ಟ್ರದ ಇಂದು ಗಾಡ್‌ ಆಫ್ ಕ್ರಿಕೆಟ್‌ ಸಚಿನ್‌ ತೆಂಡುಲ್ಕರ್‌, ಸುನಿಲ್‌ ಗವಾಸ್ಕರ್‌ ಅಜಿಂಕೆ ರಹಾನೆ ಸೇರಿದಂತೆ ಹಲವು ಕ್ರಿಕೇಟಿಗರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.

ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಅವರು ತಮ್ಮ ಪುತ್ರ ಅರ್ಜುನ್‌ ತೆಂಡುಲ್ಕರ್‌ ಜತೆ ಮುಂಬೈನ ಮತಗಟ್ಟೆಯೊಂದರಲ್ಲಿ ಮತದಾನ ಮಾಡಿದರು.

ದಕ್ಷಿಣ ಮುಂಬೈನ ವರ್ಲಿ ಯಲ್ಲಿ ಮಾಜಿ ಕ್ರಿಕೇಟಿಗ ಸುನೀಲ್‌ ಗವಾಸ್ಕರ್‌ ಮತದಾನ ಮಾಡಿದರು. ಬಳಿಕ ಪ್ರತಿಯೊಬ್ಬರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಸೂಚಿಸಿದರು.

ಅಜಿಂಕೆ ರಹಾನೆ ತಮ್ಮ ಪತ್ನಿಯೊಂದಿಗೆ ಬಂದು ಮತದಾನ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಸೂರ್ಯಕುಮಾರ್‌ ಯಾದವ್‌ ಕೂಡಾ ಮತದಾನ ಮಾಡಿ ಕಡ್ಡಾಯವಾಗಿ ಮತದಾನ ಮಾಡುವಂತೆ ಕೋರಿದ್ದಾರೆ.

Tags:
error: Content is protected !!