Mysore
22
broken clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

Legends League cricket: ಮಿಸ್ಟರ್‌ ಫೈಟರ್‌ ನಡೆ ಸ್ವೀಕಾರಾರ್ಹವಲ್ಲ; ಶ್ರೀಶಾಂತ್ ವಾಗ್ದಾಳಿ

ಮುಂಬೈ : ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌-೨೦೨೩ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಇಂಡಿಯಾ ಕ್ಯಾಪಿಟಲ್ಸ್‌ ಮತ್ತು ಗುಜರಾತ್‌ ಜೈಂಟ್ಸ್‌ ನಡುವಿನ ಪಂದ್ಯದಲ್ಲಿ ಇಂಡಿಯಾ ಕ್ಯಾಪಿಟಲ್ಸ್‌ ತಂಡವು ೧೨ ರನ್ ಅಂತರದ ಜಯ ದಾಖಲಿಸಿತು. ಇದರ ಜೊತೆ ಈ ಲೆಜೆಂಡ್ಸ್‌ ಟೂರ್ನಿಯಲ್ಲಿ ಮಾಜಿ ಆಟಗಾರರ ನಡುವೆ ಜಟಾಪಟಿ ನಡೆದಿದ್ದು, ಇದು ಮತ್ತೊಂದು ಮಜಲು ಪಡೆದುಕೊಂಡಿದೆ.

ಹಿರಿಯ ಆಟಗಾರರಾದ ಗೌತಮ್‌ ಗಂಭೀರ್‌ ಹಾಗೂ ವೇಗಿ ಶ್ರೀಶಾಂತ್‌ ನಡುವೆ ಮೈದಾನದಲ್ಲಿಯೇ ಗಲಾಟೆ ನಡೆದಿದ್ದು, ಪಿಚ್‌ನಲ್ಲಿನ ಗೌತಮ್‌ ಗಂಭೀರ್‌ ನಡೆ ಬಗ್ಗೆ ಶ್ರೀಶಾಂತ್‌ ಪತ್ರಿಕಾಗೋಷ್ಠಿಯಲ್ಲಿಯೇ ನೇರವಾಗಿ ಆರೋಪಗಳ ಸುರಿಮಳೆಗೈದಿದ್ದಾರೆ.

ಸೂರತ್‌ನ ಲಾಲಭಾಯ್ ಕಾಂಟ್ರಾಕ್ಟರ್ ಸ್ಟೇಡಿಯಂನಲ್ಲಿ ನಡೆದ ಲೆಜೆಂಡ್ಸ್‌ ಲೀಗ್‌ನ ಎಲಿಮಿನೇಟರ್ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಗೌತಮ್ ಗಂಭೀರ್ ಮತ್ತು ಎಸ್.ಶ್ರೀಶಾಂತ್ ಮೈದಾನದಲ್ಲೇ ಜಗಳವಾಡಿಕೊಂಡಿದ್ದು, ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ವೇಗಿ ಶ್ರೀಶಾಂತ್ ಕ್ಯಾಪಿಟಲ್ಸ್ ತಂಡದ ನಾಯಕ ಗಂಭೀರ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

ಗಂಭೀರ್ ಬ್ಯಾಟಿಂಗ್ ಮಾಡುವಾಗ, ಅವರು ಶ್ರೀಶಾಂತ್ ಅವರೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದರು, ನಂತರ ಅಂಪೈರ್‌ ಗಳು ಮತ್ತು ಸಹ ಆಟಗಾರರು ಮಧ್ಯಪ್ರವೇಶಿಸಿ ಜಗಳ ತಡೆದರು. ಎಲಿಮಿನೇಟರ್‌ ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇಗಿ ಶ್ರೀಶಾಂತ್, ಯಾವುದೇ ಕಾರಣವಿಲ್ಲದೆ ಗಂಭೀರ್ ತನ್ನನ್ನು ಕೆಣಕಿದ್ದರು. ಸಹ ಆಟಗಾರರನ್ನು ಗೌರವಿಸಿದ ಗಂಭೀರ್ ನಡೆಯಿಂದ ನನಗೆ ಬೇಸರವಾಗಿದೆ ಎಂದು ಹೇಳಿದ್ದಾರೆ.

“ಯಾವುದೇ ಕಾರಣವಿಲ್ಲದೆ ಯಾವಾಗಲೂ ತನ್ನ ಎಲ್ಲಾ ಸಹ ಆಟಗಾರರೊಂದಿಗೆ ಜಗಳವಾಡುವ ಮಿಸ್ಟರ್ ಫೈಟರ್‌ ನೊಂದಿಗೆ ಏನಾಯಿತು ಎಂಬುದರ ಕುರಿತು ತಿಳಿಸಲು ನಾನು ಬಯಸುತ್ತೇನೆ. ಅವರು ವೀರೂ ಭಾಯ್ ಮತ್ತು ಬಹಳಷ್ಟು ಜನರನ್ನು ಒಳಗೊಂಡಂತೆ ತಮ್ಮದೇ ಆದ ಹಿರಿಯ ಆಟಗಾರರನ್ನು ಸಹ ಗೌರವಿಸುವುದಿಲ್ಲ, ಅಂತಹದೇ ಘಟನೆಯೊಂದು ಇವತ್ತು ಸಂಭವಿಸಿದೆ.

ಯಾವುದೇ ಪ್ರಚೋದನೆಯಿಲ್ಲದೆ ಗಂಭೀರ್‌ ನನ್ನನ್ನು ರೇಗಿಸುತ್ತಿದ್ದರು, ಅದು ತುಂಬಾ ಅಸಭ್ಯವಾಗಿತ್ತು. ಇದರಲ್ಲಿ ನನ್ನದೇನು ತಪ್ಪಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಆದರೆ, ಅವರು ಪಂದ್ಯದ ವೇಳೆಯಲ್ಲಿ ಬಳಸಿದ ಪದಗಳು ಮತ್ತು ಕ್ರಿಕೆಟ್ ಮೈದಾನದಲ್ಲಿ ಅವರು ಹೇಳಿದ ಮಾತುಗಳು ಸ್ವೀಕಾರಾರ್ಹವಲ್ಲ ಎಂದು ಶ್ರೀಶಾಂತ್ ಮಾಜಿ ಟೀಂ ಇಂಡಿಯಾ ಆಟಗಾರ ಗಂಭೀರ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ