Mysore
20
overcast clouds
Light
Dark

19 ಎಸೆತಗಳಲ್ಲಿ 9 ಸಿಕ್ಸರ್;‌ 342 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿ ತಂಡ ಗೆಲ್ಲಿಸಿದ ಇರ್ಫಾನ್‌ ಪಠಾಣ್‌

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ಫೈನಲ್‌ ತಲುಪಿದ್ದ ಕಾರಣ ಭಾರತದ ಕ್ರಿಕೆಟ್‌ ಪ್ರೇಮಿಗಳ ಚಿತ್ತವೆಲ್ಲಾ ಫೈನಲ್‌ ಪಂದ್ಯದತ್ತ ನೆಟ್ಟಿತ್ತು. ಅತ್ತ ಈ ಪಂದ್ಯ ನಡೆಯುವುದಕ್ಕೂ ಮುನ್ನಾ ದಿನ ನಡೆದ ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಇರ್ಫಾನ್‌ ಪಠಾಣ್‌ ಸಂಚಲನ ಸೃಷ್ಟಿಸಿದ್ದಾರೆ. ವಿಶ್ವಕಪ್‌ ಗುಂಗಿನಲ್ಲಿ ಬ್ಯುಸಿ ಇದ್ದ ಕ್ರೀಡಾ ಪ್ರಿಯರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಇರ್ಫಾನ್‌ ಪಠಾಣ್‌ ಆಟದ ಕುರಿತು ಬರೆದುಕೊಳ್ಳಲಾರಂಭಿಸಿದ್ದಾರೆ.

ಹೌದು, ನವೆಂಬರ್‌ 8ರಂದು ರಾಂಚಿಯಲ್ಲಿ ನಡೆದ ಇಂಡಿಯಾ ಕ್ಯಾಪಿಟಲ್ಸ್‌ ಹಾಗೂ ಭಿಲ್ವಾರಾ ಕಿಂಗ್ಸ್‌ ತಂಡಗಳ ನಡುವಿನ ಪಂದ್ಯದಲ್ಲಿ ಭಿಲ್ವಾರಾ ಕಿಂಗ್ಸ್‌ ಪರ ಕಣಕ್ಕಿಳಿದಿದ್ದ ನಾಯಕ ಇರ್ಫಾನ್‌ ಪಠಾಣ್‌ 19 ಎಸೆತಗಳಲ್ಲಿ ಸಿಡಿಲಬ್ಬರದ 9 ಸಿಕ್ಸರ್‌ ಹಾಗೂ 1 ಬೌಂಡರಿ ಸಹಿತ ಅಜೇಯ 65 ರನ್‌ ಸಿಡಿಸಿ 342 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿ ಎದುರಾಳಿ ಇಂಡಿಯಾ ಕ್ಯಾಪಿಟಲ್ಸ್‌ ನೀಡಿದ್ದ 229 ರನ್‌ಗಳ ಬೃಹತ್‌ ಗುರಿಯನ್ನು ಬೆನ್ನತ್ತುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಗೌತಮ್‌ ಗಂಭೀರ್‌ ನಾಯಕತ್ವದ ಇಂಡಿಯಾ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 228 ರನ್‌ ಬಾರಿಸಿ ಭಿಲ್ವಾರಾ ಕಿಂಗ್ಸ್‌ ತಂಡಕ್ಕೆ ಗೆಲ್ಲಲು 229 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಭಿಲ್ವಾರಾ ಕಿಂಗ್ಸ್‌ ಸೋಲೊಮನ್‌ ಮೈರ್‌ ಹಾಗೂ ಇರ್ಫಾನ್‌ ಪಠಾಣ್‌ ಅಬ್ಬರದ ಬ್ಯಾಟಿಂಗ್‌ ಸಹಾಯದಿಂದ 19.2 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 229 ರನ್‌ ಕಲೆಹಾಕಿ 3 ವಿಕೆಟ್‌ಗಳ ಗೆಲುವನ್ನು ದಾಖಲಿಸಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ