Mysore
20
clear sky

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಲಕ್ಷ್ಯ ಶೂಟಿಂಗ್‌ ಕ್ಲಬ್‌: ಹೈ ಪರ್ಫಾಮೆನ್ಸ್ ಸೆಂಟರ್‌ ಸ್ಥಾಪನೆಗೆ ಸಹಿ ಹಾಕಿದ ಆಕ್ಸಿಸ್‌ ಬ್ಯಾಂಕ್‌

ಮುಂಬೈ: ಲಕ್ಷ್ಯ ಶೂಟಿಂಗ್‌ ಕ್ಲಬ್(ಎಲ್ಎಸ್‌ಸಿ) ನವಿ ಮುಂಬೈನಲ್ಲಿ ‘ಆಕ್ಸಿಸ್ ಬ್ಯಾಂಕ್ ಲಕ್ಷ್ಯ ಶೂಟಿಂಗ್ ಕ್ಲಬ್ ಹೈ ಪರ್ಫಾಮೆನ್ಸ್ ಸೆಂಟರ್ʻ ಸ್ಥಾಪಿಸಲು ಖಾಸಗಿ ವಲಯ ಆಕ್ಸಿಸ್ ಬ್ಯಾಂಕಿನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಭಾರತದ ಕ್ರೀಡಾ ಪರಿಸರವನ್ನು ಬಲಪಡಿಸುವ ದಿಟ್ಟ ನಿಲುವಿನ ಭಾಗವಾಗಿ, ಆಕ್ಸಿಸ್ ಬ್ಯಾಂಕ್‌ನ ಗ್ರೂಪ್ ಎಕ್ಸಿಕ್ಯೂಟಿವ್ ಹೆಡ್-ಹೋಲ್ಸೇಲ್ ಬ್ಯಾಂಕ್ ಕವರೇಜ್ ಮತ್ತು ಸಸ್ಟೈನಬಿಲಿಟಿಯ ವಿಜಯ್ ಮುಲ್ಬಾಗಲ್ ಹಾಗೂ ಲಕ್ಷ್ಯ ಶೂಟಿಂಗ್ ಕ್ಲಬ್‌ನ ಅಧ್ಯಕ್ಷೆ ಸುಮಾ ಶಿರೂರ್ ಅವರು ಸಹಮತದ ಪತ್ರಕ್ಕೆ ಸಹಿ ಹಾಕಿದ್ದಾರೆ.

ಒಪ್ಪಂದದ ಅಡಿಯಲ್ಲಿ, ಶೂಟಿಂಗ್ ಸೆಂಟರ್ ಅತ್ಯಾಧುನಿಕ ಸೌಕರ್ಯಗಳು, ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಸಮುದಾಯ ಭಾಗವಹಿಸುವ ಕ್ರಿಯೆಗಳು ಸೇರಿದಂತೆ ಪುಟಾಣಿ ಶೂಟರ್‌ಗಳ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ಒದಗಿಸುತ್ತದೆ. ಈ ಮೂಲಕ ಒಲಿಂಪಿಕ್ ಮಟ್ಟದ ಶ್ರೇಷ್ಠ ಶೂಟರ್‌ಗಳನ್ನು ತರಬೇತುಗೊಳಿಸಲಾಗುವುದು ಮತ್ತು ಹೊಸ ಪ್ರತಿಭೆಗಳನ್ನು ಗುರುತಿಸಲು ಒಂದು ಮುಕ್ತ ವೇದಿಕೆಯನ್ನು ರೂಪಿಸಲಿವೆ.

ಒಲಿಂಪಿಯನ್ ಹಾಗೂ ಅರ್ಜುನ, ದ್ರೋಣಾಚಾರ್ಯ ಪ್ರಶಸ್ತಿ ವಿಜೇತೆ ಸುಮಾ ಶಿರೂರ್ ಅವರು ಸ್ಥಾಪಿಸಿರುವ ಲಕ್ಷ್ಯ ಶೂಟಿಂಗ್‌ ಕ್ಲಬ್‌ ಯುವ ಶೂಟರ್‌ಗಳ ಪ್ರಸಿದ್ಧ ತರಬೇತಿ ಕೇಂದ್ರವಾಗಿದೆ. ಸುಮಾ ಶಿರೂರ್ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ರಾಷ್ಟ್ರೀಯ ಶೂಟಿಂಗ್ ತಂಡವನ್ನು ಐತಿಹಾಸಿಕ ಪದಕ ಗಳಿಕೆಗೆ ಮುನ್ನಡೆಸಿದ eminent ಕೋಚ್ ಆಗಿದ್ದಾರೆ.

ಈ ಬಗ್ಗೆ ಮಾತನಾಡಿದ ವಿಜಯ್ ಮುಲ್ಬಾಗಲ್, ಭಾರತದಲ್ಲಿ ವಿಶ್ವ ದರ್ಜೆಯ ಶೂಟಿಂಗ್ ಮೂಲಸೌಕರ್ಯವನ್ನು ಸ್ಥಾಪಿಸಲು ಲಕ್ಷ್ಯ ಶೂಟಿಂಗ್ ಕ್ಲಬ್‌ನೊಂದಿಗೆ ಪಾಲುದಾರಿಕೆ ಹೊಂದಿರುವುದು ಹೆಮ್ಮೆಯ ಸಂಗತಿ. ಈ ಮೂಲಕ ಭಾರತೀಯ ಕ್ರೀಡೆಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಪ್ರತಿಪಾದಿಸಿದರು.

ಇಲ್ಲಿನ ಶೂಟರ್‌ಗಳು ಒಲಿಂಪಿಕ್ ಮಟ್ಟದಲ್ಲಿ ಯಶಸ್ವಿಯಾಗಲು ಸಹಾಯ ಮಾಡುವುದು ಕೇಂದ್ರದ ಪ್ರಮುಖ ಉದ್ದೇಶವಾಗಿದೆ. ಈ ಕೇಂದ್ರವು ದೇಶದ ಮುಂದಿನ ಪೀಳಿಗೆಯ ಶೂಟಿಂಗ್ ಪ್ರತಿಭೆಯನ್ನು ಗುರುತಿಸಲು ಮತ್ತು ಪೋಷಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಲಕ್ಷ್ಯ ಶೂಟಿಂಗ್ ಕ್ಲಬ್‌ನ ಒಲಿಂಪಿಯನ್ ಮತ್ತು ಹೈ-ಪರ್ಫಾರ್ಮೆನ್ಸ್ ನಿರ್ದೇಶಕಿ ಸುಮಾ ಶಿರೂರ್ ಮಾತನಾಡಿ, ಆಕ್ಸಿಸ್ ಬ್ಯಾಂಕ್‌ನೊಂದಿಗಿನ ಈ ಪಾಲುದಾರಿಕೆಯು ಅರ್ಥಪೂರ್ಣವಾಗಿದೆ. ಯುವ ಪ್ರತಿಭೆಗಳಿಗೆ ಸರಿಯಾದ ಬೆಂಬಲ ಸಿಗುವ ಕೇಂದ್ರ ಇದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಪ್ರತಿಯೊಬ್ಬ ಯುವ ಶೂಟರ್ ಯಶಸ್ವಿಯಾಗಲು ಇದೊಂದು ಸದಾವಕಾಶ ಎಂದಿದ್ದಾರೆ.

ತರಬೇತಿ ಕೇಂದ್ರದಲ್ಲಿ ವರ್ಷದಲ್ಲಿ 400ಕ್ಕಿಂತ ಹೆಚ್ಚು ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಭಾರತದ ಪ್ಯಾರಾಲಿಂಪಿಕ್ಸ್ ಮತ್ತು ಡೆಫ್ಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿದ ಪ್ಯಾರಾ ಕ್ರೀಡಾಪಟುಗಳು ಸೇರಿದಂತೆ ಎಲ್ಲರಿಗೂ ಇಲ್ಲಿ ಬೆಂಬಲ ಒದಗಿಸಲಾಗುತ್ತದೆ ಎಂದು ಹೇಳಿದರು.

ಒಪ್ಪಂದದ ಅಡಿಯಲ್ಲಿ ಕ್ಲಬ್‌ನ ಸೌಲಭ್ಯಗಳು ಹೀಗಿವೆ…

* ಏರ್ ರೈಫಲ್, ಏರ್ ಪಿಸ್ಟಲ್ ಮತ್ತು ನಿಗದಿತ 50 ಮೀ. ರೈಫಲ್‌ಗಾಗಿ ಇಬ್ಬರಿಗಾಗಿ ಸುಧಾರಿತ ಶೂಟಿಂಗ್ ಶ್ರೇಣಿಗಳು.
* ಕಾರ್ಯಕ್ಷಮತೆಯ ವಿಶ್ಲೇಷಣೆ, ಗಾಯ ತಡೆಗಟ್ಟುವಿಕೆ ಮತ್ತು ಪುನಶ್ಚೇತನ ನೆರವುಗಳನ್ನು ಒಳಗೊಂಡ ಸ್ಪೋರ್ಟ್ಸ್ ಸೈನ್ಸ್ ಸೆಂಟರ್.
* ಕ್ರೀಡಾಪಟುಗಳ ಭಾವನಾತ್ಮಕ ಹಾಗೂ ಮಾನಸಿಕ ಕ್ಷೇಮಾಭಿವೃದ್ಧಿಗೆ ಸಹಾಯ ಮಾಡುವ ಸ್ಪೋರ್ಟ್ಸ್ ಸೈಕೋಲಜಿ ಘಟಕ.
* ಆಟಗಾರರು ಮತ್ತು ಕೋಚ್‌ಗಳಿಗಾಗಿ ವಾಸ್ತವ್ಯ ಸೌಲಭ್ಯಗಳು ಹಾಗೂ ಹೆಚ್ಚಿನ ತರಬೇತಿ ವ್ಯವಸ್ಥೆಗಳು

Tags:
error: Content is protected !!