ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಅವರು ಪ್ರಿ-ಕ್ವಾಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಲಕ್ಷ್ಯ ಸೇನ್ ಅವರು ನೇರ ಸೆಟ್‌ಗಳಲ್ಲಿ ವಿಶ್ವದ ನಾಲ್ಕನೇ ಕ್ರಮಾಂಕದ ಆಟಗಾರ ಇಂಡೋನೇಷ್ಯಾದ ಜೋನಾಥನ್ ಕ್ರಿಸ್ಟಿ ವಿರುದ್ಧ ಭರ್ಜರಿ ಜಯ ಸಾಧಿಸಿದರು.
ಜೊನಾಥನ್ ಕ್ರಸ್ಟಿ ಎದುರು 22 ವರ್ಷದ ಲಕ್ಷ್ಯಸೇನ್ ಅವರು ಆರಂಭದಿಂದಲೇ ತನ್ನ ಪ್ರಾಬಲ್ಯವನ್ನು ಸಾಧಿಸಿದರು. 21-18, 21-12 ಸೆಟ್‌ಗಳಿಂದ ಆಲ್ ಇಂಗ್ಲೆಂಡ್ ಮತ್ತು ಏಷ್ಯನ್ ಚಾಂಪಿಯನ್ ಕ್ರಿಸ್ಟಿ ಅವರನ್ನು ಲಕ್ಷ್ಯ ಸೇನ್ ಸೋಲಿಸಿದರು. ಕ್ರಿಸ್ಟಿ ಅವರು ಪ್ರಬಲ ಪೈಪೋಟಿ ನೀಡುವಲ್ಲಿ ವಿಫಲರಾದರು.
ಪ್ರಿ ಕ್ವಾಟರ್ ಫೈನಲ್‌ನಲ್ಲಿ ತಮ್ಮದೇ ದೇಶದವರೇ ಆದ ಎಚ್‌ಎಸ್ ಪ್ರಣಯ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಪ್ರಣಯ್ ದಿನದ ನಂತರ ವಿಯೆಟ್ನಾಂ ಲೆ ಡಕ್ ಫಟ್ ಅವರನ್ನು ಎದುರಿಸಲಿದ್ದಾರೆ.





