Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಗಿನ್ನೀಸ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್ ಮಾನ್ಯತೆ ಪಡೆದ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ

ಮಡಿಕೇರಿ: ೨೪ ವರ್ಷಗಳಿಂದ ಕೊಡವರು ವಾತ್ರವಲ್ಲದೆ ಕೊಡಗಿನ ಜನತೆ, ಹಾಕಿ ಪ್ರೇಮಿಗಳು, ಕ್ರೀಡಾಭಿವಾನಿಗಳು ನಿರೀಕ್ಷೆ ವಾಡಿದ್ದ ಕನಸು ಈಗ ನನಸಾಗಿದೆ. ಹೌದು, ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸುಮಾರು ಒಂದು ತಿಂಗಳಿನಿಂದ ನಡೆದ ಹಾಕಿ ಪಂದ್ಯಾವಳಿಯ ಅಂತಿಮ ದಿನ ಗಿನ್ನೀಸ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್ ಮಾನ್ಯತೆ ದೊರೆತಿದೆ.

೨೪ ವರ್ಷಗಳ ಹಿಂದೆ ಕರಡ ಗ್ರಾಮದ ಪಾಂಡಂಡ ಕುಟ್ಟಪ್ಪ ಮತ್ತು ಕಾಶಿ ಸಹೋದರರು ಕೊಡವರ ಹಾಕಿ ಪಂದ್ಯಾವಳಿಯ ಕನಸು ಕಂಡು ಅದನ್ನು ಸಾಕಾರಗೊಳಿಸಿದ ನಂತರ ಕೊಡವ ಕೌಟುಂಬಿಕ ಹಾಕಿಗೆ ರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯ ಮಾನ್ಯತೆ ದೊರಕಿತ್ತು. ಬಳಿಕ ಕುಟುಂಬ ತಂಡಗಳು ಕೊಡವ ಕೌಟುಂಬಿಕ ಹಾಕಿ ಹಬ್ಬವನ್ನು ಮುಂದುವರಿಸಿಕೊಂಡು ಬಂದಿದ್ದರು.

ಪ್ರತಿ ವರ್ಷ ಕೊಡವ ಕುಟುಂಬದವರು ವಾತ್ರವಲ್ಲದೆ, ಇತರ ಕ್ರೀಡಾಭಿವಾನಿಗಳು ಕೂಡ ಹಾಕಿ ಪಂದ್ಯಾವಳಿ ವೀಕ್ಷಿಸುತ್ತಿದ್ದರು. ಹಬ್ಬದಂತೆ ಒಂದು ಕ್ರೀಡೆಯನ್ನು ಆಡಬಹುದು ಎಂಬುದಕ್ಕೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ಸಾಕ್ಷಿಯಾಗಿತ್ತು. ಇದೀಗ ಗಿನ್ನೀಸ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್‌ನವರು ಕೂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ವಿಶ್ವದಲ್ಲಿ ಒಂದೇ ಮೈದಾನದಲ್ಲಿ ಒಂದೇ ಸಮುದಾಯದವರು ಅತಿ ಹೆಚ್ಚು ತಂಡಗಳ ಮೂಲಕ ಅತಿ ಹೆಚ್ಚು ದಿನಗಳು ಆಡುವ ಕ್ರೀಡೆ ಎಂಬ ದಾಖಲೆಯ ಮಾನ್ಯತೆ ನೀಡಿದ್ದಾರೆ.

ಕೊಡವ ಜನಾಂಗದಲ್ಲಿ ಹಾಕಿ ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಡವ ಕುಟುಂಬಗಳ ನಡುವೇ ಹಾಕಿ ಪಂದ್ಯಾಟವನ್ನು ೨೪ ವರ್ಷಗಳಿಂದ ಆಯೋಜಿಸುತ್ತಾ ಬರಲಾಗಿದ್ದು, ಈ ವರ್ಷ ೨ ಕೋಟಿ ರೂ. ವೆಚ್ಚದಲ್ಲಿ ಕುಂಡ್ಯೋಳಂಡ ಕುಟುಂಬಸ್ಥರು ಪಂದ್ಯಾವಳಿ ಆಯೋಜಿಸಿದ್ದರು. ಅಲ್ಲದೆ, ಪಂದ್ಯಾಟದಲ್ಲಿ ದಾಖಲೆಯ 360 ಕುಟುಂಬ ತಂಡಗಳ 3 ಸಾವಿರಕ್ಕೂ ಅಧಿಕ ಆಟಗಾರರು ಪಾಲ್ಗೊಂಡಿದ್ದರು. ಪಂದ್ಯಾವಳಿ ವೀಕ್ಷಿಸಿದ ಗಿನ್ನೀಸ್ ರೆಕಾಡ್ಸ್ ಸಂಸ್ಥೆಯು ಸದಸ್ಯ ಸೆಪ್ನಿಲ್ ಅವರು ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಗಿನ್ನೀಸ್ ರೆಕಾರ್ಡ್ ವಾನ್ಯತೆ ನೀಡಿದ್ದು ವಿಶೇಷವಾಗಿತ್ತು.

Tags: