ಲೆಜೆಂಡ್ಸ್ ಲೀಗ್ ಪಂದ್ಯದ ವೇಳೆ ಗೌತಮ್ ಗಂಭೀರ್ ಅವರ ಜೊತೆ ಕಿರಿಕ್ ಮಾಡಿಕೊಂಡಿದ್ದ ಶ್ರೀಶಾಂತ್ ಅವರಿಗೆ ಲೆಜೆಂಡ್ಸ್ ಲೀಗ್ ನ ಆಯೋಜಕರು ಲೀಗಲ್ ನೋಟಿಸ್ ಮಾಡಿದ್ದಾರೆ.
ಗೌತಮ್ ಗಂಭೀರ್ ನನ್ನನ್ನು ಫಿಕ್ಸರ್ ಅಂತಾ ನಿಂದಿಸಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ಶರೀಶಾಂತ್ ಗೆ ಇದೀಗ ಲೀಗಲ್ ನೋಟಿಸ್ ಜಾರಿಯಾಗಿದ್ದು, ವೈರಲ್ ಆಗಿರುವ ವಿಡಿಯೋ ಡಿಲಿಟ್ ಮಾಡಿದ ನಂತರ ಈ ಪ್ರಕರಣದ ಕುರಿತು ಮಾತು ಕತೆ ನಡೆಸುವುದಾಗಿ ಲೆಜೆಂಡ್ಸ್ ಲೀಗ್ ನ ಆಯೋಜಕರು ತಿಳಿಸಿದ್ದಾರೆ.
ಲೆಜೆಂಡ್ಸ್ ಲೀಗ್ ನಲ್ಲಿ ಇಂಡಿಯಾ ಕ್ಯಾಪಿಟಲ್ ಹಾಗೂ ಗುಜರಾತ್ ಜೈಂಟ್ಸ್ ನಡುವಣ ಪಂದ್ಯದ ವೇಳೆ ಗೌತಮ್ ಗಂಭೀರ್ ಮತ್ತು ಶ್ರೀಶಾಂತ್ ನಡುವೆ ವಾಗ್ಯುದ್ಧ ನಡೆದಿತ್ತು. ಇದಾದ ಬಳಿಕ ಶ್ರೀಶಾಣತ್ ಅವರು ಗೌತಮ್ ಗಂಭೀರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದರು. ಆ ವಿಡಿಯೋದಲ್ಲಿ ಗೌತಮ್ ಗಂಭೀರ್ ಅವರು ನನ್ನನ್ನು ಫಿಕ್ಸರ್ ಎಂದು ಕೂಗಿ ಅವಮಾನಿಸಿದರು. ಅಷ್ಟೇ ಅಲ್ಲದೇ ಅಂಪೈರ್ ಇರುವಾಗಲೂ ಕೂಡ ಗಂಭೀರ್ ಇದೇ ರೀತಿಯಲ್ಲಿ ನಿಂದಿಸಿ ಅವಮಾನಿಸಿದ್ದರು ಎಂದು ಆರೋಪಿಸಿದ್ದರು.
ಇದೀಗ ಶ್ರೀಶಾಂತ್ ಗೆ ಲೀಗಲ್ ನೋಟಿಸ್ ಜಾರಿಯಾಗಿದ್ದು, ಗಂಭೀರ್ ವಿರುದ್ಧ ಆರೋಪಿಸಿರುವ ಎಲ್ಲಾ ವಿಡಿಯೋಗಳನ್ನು ತಕ್ಷಣವೇ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡುವಂತೆ ಸೂಚನೆ ನೀಡಲಾಗಿದೆ.