Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಜುಡೊ ಕ್ರೀಡೆಯಲ್ಲಿ ಕಂಚು ಗೆದ್ದ ಕಪಿಲ್‌

ಪ್ಯಾರಿಸ್‌: ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಪ್ಯಾರ ಜುಡೊ ಸ್ಪರ್ಧಿ ಕಪಿಲ್‌ ಪರ್ಮಾರ್‌ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಪ್ಯಾರ ಜುಡೊದಲ್ಲಿ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಪಿಲ್‌ ಪರ್ಮಾರ್‌ ಅವರು ಪುರುಷರ 60ಕೆ.ಜಿ ಜೆ1 ಜುಡೊ ಸ್ಪರ್ಧೆಯಲ್ಲಿ, ಬ್ರೆಜಿಲ್‌ನ ಎಲಿಯಲ್ಟನ್‌ ಡಿ ಒಲಿವೇರಾ ಅವರನ್ನು 10-0 ಅಂತರದಿಂದ ಮಣಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

2022ರ ಏಪ್ಯನ್‌ ಗೇಮ್ಸ್‌ನಲ್ಲೂ ಇದೇ ವಿಭಾಗದಲ್ಲಿ ಕಪಿಲ್‌ ಬೆಳ್ಳಿ ಪದಕ ಗೆದ್ದಿದ್ದರು.

Tags: