ಅಹ್ಮದಾಬಾದ್ : ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಆ ಮೂಲಕ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸ್ ಅವರ ಹಿಂದಿನ ದಾಖಲೆಯನ್ನ ಮುರಿಯುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ.
ರೋಹಿತ್ ಶರ್ಮಾ ಈ ಆವೃತ್ತಿಯಲ್ಲಿ ಹಲವಾರು ದಾಖಲೆಗಳನ್ನು ತಮ್ಮ ಮುಡಗೇರಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಫೈನಲ್ ಪಂದ್ಯದಲ್ಲಿ ಹಿಟ್ ಮ್ಯಾನ್ 31 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಮೂರು ಸಿಕ್ಸರ್ ಸಹಿತ 47 ರನ್ ಕಲೆಹಾಕಿ 597 ರನ್ ಪೇರಿಸಿದರು. ಇದರಿಂದಾಗಿ ನಾಯಕನೊಬ್ಬನ ಗರಿಷ್ಠ ವಯಕ್ತಿಕ ರನ್ ಗಳಿಕೆಯಲ್ಲಿ ರೋಹಿತ್ ಶರ್ಮಾ ಕೇನ್ ಇಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ.
ಪಂದ್ಯದಲ್ಲಿ 29 ರನ್ ಗಳಿಸುತ್ತಿದ್ದಂತೆ ರೋಹಿತ್ ಶರ್ಮಾ, 579 ರನ್‌ಗಳೊಂದಿಗೆ ಏಕೈಕ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಯಕ ಎಂಬ ದಾಖಲೆ ನಿರ್ಮಿಸಿದರು. 2019 ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ 578 ರನ್ ಗಳಿಸಿ ವಿಶ್ವಕಪ್ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ರೋಹಿತ್ ಶರ್ಮಾ ಮುರಿದಿದ್ದಾರೆ.
ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಯಕರು
ರೋಹಿತ್ ಶರ್ಮಾ-597 ರನ್- ಭಾರತ-2023
ಕೇನ್ ವಿಲಿಯಮ್ಸನ್- 578 ರನ್- ನ್ಯೂಜಿಲೆಂಡ್-2019
ಮಹೇಲಾ ಜಯವರ್ಧನೆ-548 ರನ್ – ಶ್ರೀಲಂಕಾ-2007
ರಿಕಿ ಪಾಂಟಿಂಗ್- 539 ರನ್- ಆಸ್ಟ್ರೇಲಿಯಾ- 2007
ಆರೋನ್ ಫಿಂಚ್- 507 ರನ್- 2019
ಕ್ರಿಸ್ ಗೇಲ್‌ರ ಸಿಕ್ಸರ್‌ಗಳ ದಾಖಲೆಯೂ ಪುಡಿಪುಡಿ : 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸಿಕ್ಸರ್‌ಗಳ ಸುರಿಮಳೆ (54) ಹರಿಸಿರುವ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸುವ ಮೂಲಕ 86 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ವಂ ಘೋಷಿತ ಯುನಿವರ್ಸ್ ಬಾಸ್ ಕ್ರಿಸ್ ಗೇಲ್ (85) ನಿರ್ಮಿಸಿದ್ದ ಸಿಕ್ಸರ್‌ಗಳ ದಾಖಲೆಯನ್ನು ರೋಹಿತ್ ಶರ್ಮಾ ಮುರಿದಿದ್ದಾರೆ. ಏಕೈಕ ತಂಡದ ವಿರುದ್ಧ ಅತಿಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಯೂ ಈಗ ರೋಹಿತ್ ಪಾಲಾಗಿದೆ.
ಏಕೈಕ ತಂಡದ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ಸ್:
86- ರೋಹಿತ್ ಶರ್ಮಾ- ಭಾರತ- ಆಸ್ಟ್ರೇಲಿಯಾ ವಿರುದ್ಧ
85- ಕ್ರಿಸ್ ಗೇಲ್- ವೆಸ್ಟ್ ಇಂಡೀಸ್- ಇಂಗ್ಲೆಂಡ್ ವಿರುದ್ಧ
63- ಶಾಹಿದ್ ಅಫ್ರಿದಿ- ಪಾಕಿಸ್ತಾನ- ಶ್ರೀಲಂಕಾ ವಿರುದ್ಧ
53- ಸನತ್ ಜಯಸೂರ್ಯ- ಶ್ರೀಲಂಕಾ- ಪಾಕಿಸ್ತಾನ ವಿರುದ್ಧ