Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಜೋಶ್‌ ಇಂಗ್ಲಿಸ್‌ ಶತಕ: ಭಾರತಕ್ಕೆ 208 ರನ್ ಟಾರ್ಗೆಟ್‌ ನೀಡಿದ ಆಸೀಸ್‌

ವಿಶಾಖಪಟ್ಟಣಂ : ಜೋಶ್‌ ಇಂಗ್ಲಿಸ್‌(110) ಅವರ ಆಕರ್ಷಕ ಶತಕದಾಟದ ಬಲದಿಂದ ಆಸೀಸ್‌ ಭಾರತಕ್ಕೆ 208 ರನ್‌ಗಳ ಬೃಹತ್‌ ಗುರಿಯನ್ನು ನೀಡಿದೆ.

ಇಲ್ಲಿನ ವೈ ಎಸ್‌ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಭಾರತಕ್ಕೆ ಈ ಬೈಹತ್‌ ಮೊತ್ತದ ಟಾರ್ಗೆಟ್‌ ನೀಡಿದೆ.

ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ತಂಡ 31 ರನ್‌ ಗಳಿಸಿದ್ದಾಗ ರವಿ ಬಿಷ್ಣೋಯಿ ಅವರ ಮೊದಲ ಓವರ್‌ನಲ್ಲಿಯೇ ಮ್ಯಾಥ್ಯೂ ಶಾರ್ಟ್‌ (13) ಕ್ಲೀನ್‌ ಬೋಲ್ಡ್‌ ಆಗಿ ಹೊರನಡೆದರು. ನಂತರ ಜೊತೆಯಾದ ಸ್ಟೀವ್‌ ಸ್ಮಿತ್‌ ಹಾಗೂ ಜೋಶ್‌ ಇಂಗ್ಲಿಸ್‌ ಮುರಿಯದ 130 ರನ್‌ಗಳ ಜೊತೆಯಾಟ ತಂಡಕ್ಕೆ ಆಸರೆಯಾಯಿತು. ಜೋಶ್‌ ಇಂಗ್ಲಿಸ್‌ ತಾವೆದುರಿಸಿದ 50 ಎಸೆತಗಳಲ್ಲಿ 11 ಬೌಂಡರಿ ಹಾಗೂ 8೮ ಸಿಕ್ಸರ್‌ ಸಹಿತ 110 ರನ್‌ ಕಲೆ ಹಾಕಿದರು. ಇತ್ತ ಸ್ಟೀವ್‌ ಸ್ಮಿತ್‌ 41 ಎಸೆತಗಳಲ್ಲಿ 8 ಬೌಂಡರಿ ಸಹಿತ 52 ರನ್‌ ಕಲೆಹಾಕಿ ತಂಡ 200 ಗಡಿ ದಾಟಲು ಸಹಕರಿಸಿದರು.

ನಂತರ ಬಂದ ಸ್ಟೋಯ್ನಿಸ್‌ (7), ಟಿಮ್‌ ಡೇವಿಡ್‌(19) ರನ್‌ ಗಳಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 3208ನ್‌ ಗಳಿಸಿ ಎದುರಾಳಿಗೆ ಸ್ಪರ್ಧಾತ್ಮಕ ಟಾರ್ಗೆಟ್‌ ನೀಡಿದರು.

ಭಾರತ ಪರ ರವಿ ಬಿಷ್ಣೋಯಿ ಹಾಗೂ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ತಲಾ 1 ವಿಕೆಟ್‌ ಪಡೆದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ