Mysore
23
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಉಪವಾಸ ವಿವಾದ: ಶಮಿಗೆ ಬೆಂಬಲ ಸೂಚಿಸಿದ ಜಾವೇದ್‌ ಅಖ್ತರ್‌

ನವದೆಹಲಿ: ರಂಜಾನ್‌ ಮಾಸದಲ್ಲಿ ರೋಜಾ (ಉಪವಾಸ) ಪಾಲಿಸುತ್ತಿಲ್ಲ ಎಂಬ ಟೀಕೆಗಳಿಗೆ ಭಾರತದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅವರು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಚಿತ್ರ ಕಥೆಗಾರ ಜಾವೇದ್‌ ಅಖ್ತರ್‌ ಬೆಂಬಲ ಸೂಚಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಮತಾಂಧ ಮೂರ್ಖರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಕರಾತ್ಮಕ ವಿಚಾರಗಳತ್ತ ಗಮನ ಹರಿಸದೆ, ಫೈನಲ್‌ ಪಂದ್ಯದ ಕಡೆ ಗಮನ ನೀಡಬೇಕೆಂದು ಶಮಿಗೆ ಸಲಹೆ ನೀಡಿದ್ದಾರೆ.

ಈ ವಿಚಾರದಲ್ಲಿ ನೀವು ತಲೆಹಾಕುವ ಅಗತ್ಯವಿಲ್ಲ. ಭಾರತ ತಂಡದ ಶ್ರೇಷ್ಠ ಆಟಗಾರರಲ್ಲಿ ನೀವು ಒಬ್ಬರು ಎನ್ನುವುದು ನಮಗೆ ಖುಷಿಯ ವಿಷಯ. ನಿಮಗೆ ಮತ್ತು ನಿಮ್ಮ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ಶಮಿ ಅವರು, ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದ ವೇಳೆ ಪಾನೀಯ ಸೇವಿಸಿದ್ದರು. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳು ವ್ಯಕ್ತವಾಗಿದ್ದವು.

ಭಾರತ ಹಾಗು ನ್ಯೂಜಿಲೆಂಡ್‌ ತಂಡಗಳ ನಡುವಿನ ಫೈನಲ್‌ ಪಂದ್ಯವು ನಾಳೆ (ಮಾ.9ರಂದು) ದುಬೈನಲ್ಲಿ ನಡೆಯಲಿದೆ.

Tags:
error: Content is protected !!