Mysore
17
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮುಂಬೈ ತಂಡ ತೊರೆದು ಗೋವಾ ಸೇರಿದ ಜೈಸ್ವಾಲ್‌

ಮುಂಬೈ: ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ವೈಯುಕ್ತಿಕ ಕಾರಣಗಳಿಂದ ಮುಂಬೈ ತಂಡವನ್ನು ತ್ಯಜಿಸಿ ಗೋವಾ ತಂಡ ಸೇರಲು ನಿರ್ಧರಿಸಿದ್ದಾರೆ.

ಈ ಕುರಿತು ಮುಂಬೈ ಕ್ರಿಕೆಟ್‌ ಆಸೋಸಿಯೇಷನ್‌ಗೆ ಪತ್ರ ಬರೆದು ಗೋವಾ ತಂಡ ಸೇರುವ ಇಚ್ಚೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಯಶಸ್ವಿ ಅಂತಹ ನಿರ್ಧಾರ ಕೈಗೊಳ್ಳಲು ಏನೋ ಕಾರಣವಿರಬಹುದು. ನಾವು ಅವರ ವಿನಂತಿಯನ್ನು ಸ್ವೀಕರಿಸುತ್ತೇವೆ ಎಂದು ಅಧಿಕಾರಿಯೊಬ್ಬರು ತಿಳಸಿದ್ದಾರೆ.

ಹೀಗಾಗಿ, ಯಶಸ್ವಿ ಜೈಸ್ವಾಲ್‌ 2025-26ರ ಋತುವಿನಿಂದ ಗೋವಾ ತಂಡದ ಪರ ಆಡಲಿದ್ದಾರೆ.

ಯಶಸ್ವಿ ಜೈಸ್ವಾಲ್‌ ಅವರು ನಮಗಾಗಿ ಆಡಲು ಬಯಸುತ್ತಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ. ಮುಂದಿನ ಋತುವಿನಿಂದ ಅವರು ನಮಗಾಗಿ ಆಡಲಿದ್ದಾರೆ ಎಂದು ಗೋವಾ ಕ್ರಿಕೆಟ್‌ ಅಸೋಸಿಯೇಷನ್‌ ಕಾರ್ಯದರ್ಶಿ ಶಂಬಾ ದೇಸಾಯಿ ತಿಳಿಸಿದ್ದಾರೆ.

 

 

 

 

Tags:
error: Content is protected !!