Mysore
24
scattered clouds

Social Media

ಬುಧವಾರ, 16 ಏಪ್ರಿಲ 2025
Light
Dark

IPL2025: ಸನ್‌ ರೈಸರ್ಸ್‌ಗೆ ರಾಯಲ್ಸ್‌ ಸವಾಲು

ಹೈದರಾಬಾದ್‌: ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 18ನೇ ಆವೃತ್ತಿಯಲ್ಲಿ ಭಾನುವಾರ ರಾಜಸ್ಥಾನ ರಾಯಲ್ಸ್‌ ತಂಡವನ್ನು ಎದುರಿಸಲಿದೆ.

ಟ್ರಾವಿಸ್‌ ಹೆಡ್‌, ಅಭಿಷೇಕ್‌ ಶರ್ಮಾ, ಹೆನ್ರಿಕ್‌ ಕ್ಲಾಸೆನ್‌ ನಂತಹ ಸ್ಪೋಟಕ ಬ್ಯಾಟರ್‌ಗಳನ್ನು ಹೊಂದಿರುವ ಅತಿಥೇಯ ತಂಡವು ಬೃಹತ್‌ ಮೊತ್ತ ಗಳಿಸುವ ನಿರೀಕ್ಷೆಯಲ್ಲಿದೆ.

ಇನ್ನು ಬೌಲಿಂಗ್‌ ವಿಭಾಗದಲ್ಲಿ ಅನುಭವಿಗಳಾದ ನಾಯಕ ಪ್ಯಾಟ್‌ ಕಮಿನ್ಸ್‌, ಮೊಹಮ್ಮದ್‌ ಶಮಿ, ಆಡಂ ಜಂಪಾ ಅವರಿದ್ದು ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ.

ಇತ್ತ ರಾಜಸ್ಥಾನ ತಂಡದಿಂದ ಇಂಗ್ಲೆಂಡ್‌ನ ಜೋಸ್‌ ಬಟ್ಲರ್‌ ಅವರನ್ನು ಕೈಬಿಟ್ಟಿರುವುದರಿಂದ ಜೊತೆಗೆ ಸಂಜು ಸ್ಯಾಮ್ಸನ್‌ ಬೆರಳಿನ ಗಾಯದಿಂದ ಈಗ ಚೇತರಿಸಿಕೊಂಡಿರುವ ಕಾರಣ ಬ್ಯಾಟಿಂಗ್‌ ಬಲ ಸ್ವಲ್ಪ ಕಡಿಮೆಯಾಗಿದೆ. ಹೀಗಾಗಿ, ಶಿಮ್ರಾನ್‌ ಹೆಟ್ಮೆಯರ್‌, ಧ್ರುವ್‌ ಜುರೆಲ್‌, ನಿತೀಶ್‌ ರಾಣಾ ಮತ್ತು ಯಶಸ್ವಿ ಜೈಸ್ವಾಲ್‌ ಅವರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30

ಸ್ಥಳ: ರಾಜೀವ್‌ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್‌

ನೇರ ಪ್ರಸಾರ: ಜಿಯೊ ಹಾಟ್‌ಸ್ಟಾರ್‌

 

 

Tags: