Mysore
22
few clouds

Social Media

ಗುರುವಾರ, 10 ಏಪ್ರಿಲ 2025
Light
Dark

IPL2025: ಪಂಜಾಬ್‌ ವಿರುದ್ಧ ರಾಜಸ್ತಾನಕ್ಕೆ 50 ರನ್‌ಗಳ ಜಯ

ಚಂಡೀಗಢ: ಯಶಸ್ವಿ ಜೈಸ್ವಾಲ್‌ 67(45) ಅಬ್ಬರದ ಅರ್ಧಶತಕ ಹಾಗೂ ಬೌಲರ್‌ಗಳ ಬಿಗು ಬೌಲಿಂಗ್‌ ದಾಳಿಯಿಂದ ರಾಜಸ್ತಾನ ರಾಯಲ್ಸ್‌ ತಂಡ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ 50 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಮಹಾರಾಜ ಯದುವಿಂದ್ರ ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಅರಂಭಿಸಿದ ರಾಜಸ್ತಾನ ರಾಯಲ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 205 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ರಾಜಸ್ಥಾನ ಪರ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್‌ 38(26) ಹಾಗೂ ಜೈಸ್ವಾಲ್‌ 67(45) ಉತ್ತಮ ಆರಂಭ ಒದಗಿಸಿದರು. ಸಂಜು ಔಟಾದ ನಂತರ ಕ್ರೀಸ್‌ಗೆ ಬಂದ ರಿಯಾನ್‌ ಪರಾಗ್‌ 43(25) ಭರ್ಜರಿ ಬ್ಯಾಟಿಂಗ್‌ ಮಾಡುವ ಮೂಲಕ ರಾಜಸ್ತಾನ 200ರ ಗಡಿ ತಲುಪಲು ನೆರವಾದರು. ಉಳಿದಂತೆ ನಿತೀಶ್‌ ರಾಣಾ 12(7), ಹೆಟ್ಮೆಯರ್‌ 20(12), ಧ್ರುವ ಜುರೆಲ್‌ 13(5) ರನ್‌ಗಳ ಕಾಣಿಕೆ ನೀಡಿದರು.

ಪಂಜಾಬ್‌ ಪರ ಲಾಕಿ ಫರ್ಗೂಸನ್‌ 2 ವಿಕೆಟ್‌ ಪಡೆದರೆ, ಅರ್ಷದೀಪ್‌ ಸಿಂಗ್‌ ಹಾಗೂ ಮಾರ್ಕೊ ಯಾನ್ಸನ್‌ ತಲಾ ಒಂದು ವಿಕೆಟ್‌ ಪಡೆದರು.

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್‌ ತಂಡ ರಾಜಸ್ತಾನದ ಬಿಗಿ ಬೌಲಿಂಗ್‌ ದಾಳಿಗೆ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 155 ರನ್‌ಗಳಿಸಲಷ್ಟೇ ಶಕ್ತವಾಯಿತು.

ಪಂಜಾಬ್‌ ಪರ ನೆಹಾಲ್‌ ವಡೇರಾ 62(41) ಹಾಗೂ ಗ್ಲೆನ್‌ ಮ್ಯಾಕ್ಸವೆಲ್‌ 30(21) ಗೆಲುವಿನ ಹೋರಾಟದ ಪ್ರದರ್ಶನ ನೀಡಿದರು. ಆದರೆ, ತಂಡವನ್ನು ಗೆಲುವಿನ ದಡ ತಲುಪಿಸುವಲ್ಲಿ ವಿಫಲವಾದರು.

ರಾಜಸ್ತಾನ ತಂಡದ ಪರ ಬಿಗಿ ಬೌಲಿಂಗ್‌ ದಾಳಿ ನಡೆಸಿದ ಜೋಫ್ರಾ ಅರ್ಚರ್‌ 3 ವಿಕೆಟ್‌, ಸಂದೀಪ್‌ ಶರ್ಮಾ ಹಾಗೂ ಮಹೀಶಾ ತೀಕ್ಷಣಾ ತಲಾ ಎರಡು ವಿಕೆಟ್‌ ಪಡೆದು ಮಿಂಚಿದರು.

 

 

Tags: