Mysore
13
overcast clouds

Social Media

ಸೋಮವಾರ, 15 ಡಿಸೆಂಬರ್ 2025
Light
Dark

IPL2025: 9 ಫ್ರಾಂಚೈಸಿಗಳಿಗೆ ಭಾರತೀಯರೇ ನಾಯಕ

ಬೆಂಗಳೂರು: ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ 9 ತಂಡಗಳಿಗೆ ಭಾರತೀಯ ಆಟಗಾರರೇ ನಾಯಕಾರಾಗುವ ಮೂಲಕ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ.

ಆಸ್ಟ್ರೇಲಿಯಾದ ಪ್ಯಾಟ್‌ ಕಮಿನ್ಸ್‌ ಹೊರತುಪಡಿಸಿ ಒಂಬತ್ತು ಫ್ರಾಂಚೈಸಿಗಳಿಗೆ ಭಾರತೀಯ ಆಟಗಾರರೇ ನಾಯಕರಾಗಿ ಅಯ್ಕೆಯಾಗಿದ್ದಾರೆ.

ಪ್ಯಾಟ್‌ ಕಮಿನ್ಸ್‌ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವನ್ನು ಮುನ್ನಡೆಸಲಿದ್ದಾರೆ. ಇದನ್ನು ಬಿಟ್ಟು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ರಜತ್‌ ಪಾಟೀದಾರ್‌, ಮುಂಬೈ ಇಂಡಿಯನ್ಸ್‌ಗೆ ಹಾರ್ದಿಕ್‌ ಪಾಂಡ್ಯ, ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಋತುರಾಜ್‌ ಗಾಯಕ್‌ವಾಡ್‌, ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಕ್ಷರ್‌ ಪಟೇಲ್‌, ಗುಜರಾತ್‌ ಜೈಂಟ್ಸ್‌ಗೆ ಶುಭಮನ್‌ ಗಿಲ್‌, ಕೋಲ್ಕತ್ತಾ ನೈಟ್‌ ರೈಡರ್ಸ್‌ಗೆ ಅಜಿಂಕ್ಯ ರಹಾನೆ. ಲಖನೌ ಸೂಪರ್‌ ಜೈಂಟ್ಸ್‌ಗೆ ರಿಷಭ್‌ ಪಂತ್‌, ಪಂಜಾಬ್‌ ಕಿಂಗ್ಸ್‌ಗೆ ಶ್ರೇಯಸ್‌ ಅಯ್ಯರ್‌ ಮತ್ತು ರಾಜಸ್ಥಾನ ರಾಯಲ್ಸ್‌ಗೆ ಸಂಜು ಸಾಮ್ಸನ್‌ ನಾಯಕರಾಗಿದ್ದಾರೆ.

ಈ ಬಾರಿಯ ಐಪಿಎಲ್‌ ಪಂದ್ಯದಲ್ಲಿ ರಜತ್‌ ಪಾಟೀದಾರ್‌ ಹಾಗೂ ಅಕ್ಷರ್‌ ಪಾಟೀಲ್‌ ಮೊದಲ ಬಾರಿಗೆ ನಾಯಕನಾಗಿ ತಮ್ಮ ತಂಡವನ್ನು ಮುನ್ನಡೆಸಲಿದ್ದಾರೆ.

Tags:
error: Content is protected !!