ನವದೆಹಲಿ: ದಕ್ಷಿಣ ಆಫ್ರಿಕಾದ ಆಟಗಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉಪನಾಯಕನಾಗಿ ನೇಮಿಸಲಾಗಿದೆ.
ಹೊಸ ತಂಡಕ್ಕೆ ಸೇರ್ಪಡೆಯ ನಂತರ ಮಾತನಾಡಿರುವ ಅವರು, ಡೆಲ್ಲಿ ತಂಡದಲ್ಲಿ ಶ್ರೇಷ್ಠ ಆಟಗಾರರಿದ್ದಾರೆ. ಅವರ ಜೊತೆಯಲ್ಲಿ ಆಡಲು ನಾನು ಕಾತರದಿಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
40 ವರ್ಷದ ಡು ಪ್ಲೆಸಿ, ಐಪಿಎಲ್‌ನಲ್ಲಿ 145 ಪಂದ್ಯಗಳನ್ನಾಡಿದ್ದು, 37 ಅರ್ಧಶತಕದ ಜೊತೆಗೆ 4,571 ರನ್ ಗಳಿಸಿದ್ದಾರೆ.
ಡೆಲ್ಲಿ ತಂಡವು ಐಪಿಎಲ್‌ನ ತನ್ನ ಮೊದಲ ಪಂದ್ಯವನ್ನು ವಿಶಾಖಪಟ್ಟಣದಲ್ಲಿ ಮಾರ್ಚ್ 24ರಂದು ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಆಡಲಿದೆ.





