Mysore
24
overcast clouds

Social Media

ಶುಕ್ರವಾರ, 04 ಏಪ್ರಿಲ 2025
Light
Dark

IPL 2025 |ಗೆದ್ದ ಗುಜರಾತ್‌ ; 2ನೇ ಪಂದ್ಯದಲ್ಲೂ ಸೋತ ಮುಂಬೈ

ಅಹಮದಾಬಾದ್‌ : ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಅವರ ಕರಾರುವಕ್ಕಾದ ಬೌಲಿಂಗ್‌ ದಾಳಿಗೆ ನಲುಗಿದ ಮುಂಬೈ ಪಡೆ ಗುಜರಾತ್‌ ವಿರುದ್ಧ 36 ರನ್‌ಗಳ ಅಂತರದಿಂದ ಹೀನಾಯ ಸೋಲು ಕಂಡಿತು. ಆ ಮೂಲಕ ಮುಂಬೈ ಟೂರ್ನಿಯಲ್ಲಿ ತಾವಾಡಿದ ಮೊದಲೆರೆಡು ಪಂದ್ಯಗಳಲ್ಲಿಯೂ ಸೋಲು ಕಂಡಿತು. ಇನ್ನು ಮುಂಬೈ ಮಣಿಸಿ ಗುಜರಾತ್‌ ಸತತ ಎರಡನೇ ಗೆಲುವು ದಾಖಲಿಸಿತು.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್‌ ಟೈಟನ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ನಡುವಣ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಅವರು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 196 ರನ್‌ ಗಳಿಸಿತು. ಈ ಮೊತ್ತ ಬೆನ್ನತ್ತಿದ ಮುಂಬೈ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 160 ರನ್‌ ಗಳಿಸಿ 36 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು.

ಜಿಟಿ ಇನ್ನಿಂಗ್ಸ್‌: ಮುಂಬೈ ವಿರುದ್ಧ ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ಗೆ ಉತ್ತಮ ಆರಂಭ ದೊರೆಯಿತು. ಸಾಯ್‌ ಸುದರ್ಶನ್‌ 63(41), ನಾಯಕ ಗಿಲ್‌ 38(27) ರನ್‌ ಗಳಿಸಿ ಭದ್ರ ಬುನಾದಿ ಹಾಕಿದರು.

ಬಳಿಕ ಬಂದ ಬಟ್ಲರ್‌ 39(24), ಶಾರುಖ್‌ ಖಾನ್‌ 9(7), ರುದರ್‌ಫರ್ಡ್‌ 18(11), ರಾಹುಲ್‌ ತೆವಾಟಿಯಾ ಶೂನ್ಯ, ರಶೀದ್‌ ಖಾನ್‌ 6(4), ಸಾಯ್‌ ಕಿಶೋರ್‌ 1(1) ರನ್‌ ಗಳಿಸಿದರು. ರಬಾಡ ಔಟಾಗದೇ 7(5) ರನ್‌ ಗಳಿಸಿದರು.

ಮುಂಬೈ ಪರ ಹಾರ್ದಿಕ್‌ ಪಾಂಡ್ಯ ಎರಡು, ಬೋಲ್ಟ್‌, ದೀಪಕ್‌ ಚಾಹರ್‌, ರೆಹಮಾನ್‌ ಹಾಗೂ ಸತ್ಯ ನಾರಾಯಣ ತಲಾ ಒಂದೊಂದು ವಿಕೆಟ್‌ ಪಡೆದರು.

ಮುಂಬೈ ಇನ್ನಿಂಗ್ಸ್‌: ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಮುಂಬೈಗೆ ಆರಂಭಿಕ ಆಘಾತ ಎದುರಾಯಿತು. ರೋಹಿತ್‌ ಶರ್ಮಾ 8(4), ರಿಕೆಲ್ಟನ್‌ 6(9) ರನ್‌ ಗಳಿಸಿ ಬಂದಷ್ಟೆ ವೇಗವಾಗಿ ಹಿಂತಿರುಗಿದರು.

ಬಳಿಕ ಜೊತೆಯಾದ ತಿಲಕ್‌ ವರ್ಮಾ 39(36) ಹಾಗೂ ಸೂರ್ಯಕುಮಾರ್‌ ಯಾದವ್‌ 48(28) ಅಲ್ಪ ಹೋರಾಟ ತೋರಿದರು ತಂಡವನ್ನು ಗೆಲ್ಲಿಸಿಕೊಡಲು ಸಾಧ್ಯವಾಗಲಿಲ್ಲ. ಬಳಿಕ ಬಂದ ಬೇರಾರಿಂದಲೂ ನಿರೀಕ್ಷಿತ ಆಟ ಕಂಡುಬರಲಿಲ್ಲ.

ಉಳಿದಂತೆ ರಾಬಿನ್‌ 3(6), ನಾಯಕ ಹಾರ್ದಿಕ್‌ ಪಾಂಡ್ಯ 11(17), ನಮನ್‌ ಧಿರ್‌ ಔಟಾಗದೇ 18(11), ಮಿಚೆಲ್‌ ಸ್ಯಾಂಟ್ನರ್‌ ಔಟಾಗದೇ 18(9) ರನ್‌ ಗಳಸಿ ಸ್ಕ್ರೀಸ್‌ನಲ್ಲಿ ಉಳಿದರು.

ಗುಜರಾತ್‌ ಪರ ಪ್ರಸಿದ್ಧ್‌ ಕೃಷ್ಣ ಹಾಗೂ ಮೊಹಮದ್‌ ಸಿರಾಜ್‌ ತಲಾ ಎರಡು ವಿಕೆಟ್‌, ಸಾಯ್‌ ಕಿಶೋರ್‌ ಹಾಗೂ ರಬಾಡ ತಲಾ ಒಂದೊಂದು ವಿಕೆಟ್‌ ಪಡೆದರು.

Tags: