ನವದೆಹಲಿ : ಟೀಂ ಇಂಡಿಯಾದ ಆಲ್‌ರೌಂಡ್ ಆಟಗಾರ ಹಾರ್ದಿಕ್ ಪಾಂಡ್ಯ ಇಂಡಿಯನ್ ಪ್ರೀಮಿಯರ್ ಲೀಗ್-2024ರಲ್ಲಿ ತಮ್ಮ ಹಳೆಯ ಪ್ರಾಂಚೈಸಿ ಮುಂಬೈ ಇಂಡಿಯನ್ಸ್‌ಗೆ ವಾಪಾಸ್ ಆಗಲಿದ್ದಾರೆ ಎಂಬ ಉಹಾಪೋಹಗಳು ಹರಿದಾಡುತ್ತಿದ್ದು, ಎಲ್ಲದಕ್ಕೂ ಈಗ ತೆರೆಬಿದ್ದಿದೆ. ಇದರ ಬಗ್ಗೆ ಗುಜರಾತ್ ಫ್ರಾಂಚೈಸಿಯಿಂದ ಭಾನುವಾರ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ಹಾರ್ದಿಕ್ ನಾಯಕನಾಗಿ ಮುಂದುವರೆಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಾಂಡ್ಯ ಅವರು 2022ರಲ್ಲಿ ಜಿಟಿಗೆ ನಾಯಕರಾಗಿ ನೇಮಕಗೊಂಡು, ಮೊದಲ ಆವೃತ್ತಿಯಲ್ಲಿಯೇ ತಂಡಕ್ಕೆ ಚೊಚ್ಚಲ ಪ್ರಶಸ್ತಿ ತಂದುಕೊಟ್ಟರು. ಸೀಸನ್-16ರಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಫೈನಲ್‌ನಲ್ಲಿ ಚೆನ್ನೈ ಸೂಪರ ಕಿಂಗ್ಸ್ ವಿರುದ್ಧ ಸೋತು ರನ್ನರ್ ಅಪ್ ಸ್ಥಾನ ಪಡೆದಿತ್ತು.
ಮುಂಬೈ ತಂಡವು 2024ರ ಐಪಿಎಲ್‌ಗೆ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಮುಂದುವರಿಸಿದೆ. ಮೊಣಕೈ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ವೇಗಿ ಜೋಫ್ರಾ ಆರ್ಚರ್ ಅವರನ್ನು ಬಿಡುಗಡೆ ಮಾಡದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹರ್ಷಲ್ ಪಟೇಲ್, ಶ್ರೀಲಂಕಾದ ಲೆಗ್‌ಸ್ಪಿನ್ನರ್ ವನಿಂದು ಹಸರಂಗ, ಆಸೀಸ್ ಬೌಲರ್ ಜೋಶ್ ಹ್ಯಾಜಲ್‌ವುಡ್, ಇಂಗ್ಲೆಂಡ್ ವೆಗಿ ಡೇವಿಡ್ ವಿಲ್ಲಿ ಅವರನ್ನು ಬಿಡುಗಡೆ ಮಾಡಿದೆ.
ಐಪಿಎಲ್ 2024 ರ ಆವೃತ್ತಿಗೆ ಡಿಸೆಂಬರ್ 19 ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಫ್ರಾಂಚೈಸಿಗಳು ಹಲವು ಆಟಗಾರರನ್ನು ಉಳಿಸಿಕೊಂಡು, ಮತ್ತೆ ಕೆಲವರನ್ನು ಬಿಡುಗಡೆ ಮಾಡಿವೆ.
ಪ್ರತಿ ತಂಡದಲ್ಲಿ ಬಿಡುಗಡೆಯಾದ ಆಟಗಾರರು:
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಬಿಡುಗಡೆಯಾದವರು): ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ದಾರ್ಥ್ ಕೌಲ್, ಕೇದಾರ್ ಜಾಧವ್
ಮುಂಬೈ ಇಂಡಿಯನ್ಸ್ (ಬಿಡುಗಡೆಯಾದವರು) : ಅರ್ಷದ್ ಖಾನ್, ರಮಣದೀಪ್ ಸಿಂಗ್, ಹೃತಿಕ್ ಶೋಕೀನ್, ರಾಘವ್ ಗೋಯಲ್, ಜೋಫ್ರಾ ಆರ್ಚರ್, ಟ್ರಿಸ್ಟಾನ್ ಸ್ವಬ್, ಡುವಾನ್ ಜಾನ್ಸನ್, ಜೇ ರಿಚರ್ಡ್ಸ್ನ್, ರಿಲೆ ಮೆರೆಡಿತ್, ಕ್ರಿಸ್ ಜೋರ್ಡಾನ್, ಸಂದೀಪ್ ವಾರಿಯರ್.
ಗುಜರಾತ್ ಟೈಟಾನ್ಸ್ (ಬಿಡುಗಡೆಯಾದವರು) : ಯಶ್ ದಯಾಳ್, ಕೆ.ಎಸ್. ಭರತ್, ಶಿವಂ ಮಾವಿ, ಉರ್ವಿಲ್ ಪಟೇಲ್, ಪ್ರದೀಪ್ ಸಾಂಗ್ವಾನ್, ಓಡಿಯನ್ ಸ್ಮಿತ್, ಅಲ್ವಾರಿ ಜೋಸೆಫ್, ದಸುನ್ ಶನಕ.
ಲಖನೌ ಸೂಪರ್ ಜೈಂಟ್ಸ್ (ಬಿಡುಗಡೆಯಾದವರು) : ಡೇನಿಯಲ್ ಸ್ಯಾಮ್ಸ್, ಕರುಣ್ ನಾಯರ್, ಜಯದೇವ್ ಉನದ್ವತ್, ಮನನ್ ವೋಹ್ರಾ, ಕರಣ್ ಶರ್ಮಾ, ಸೂರ್ಯಾಂಶ್ ಶೆಡ್ಜ್, ಸ್ವಪ್ಟಿಲ್ ಸಿಂಗ್, ಅರ್ಪಿತ್ ಗುಲೇರಿಯಾ.
ಸನ್‌ರೈಸರ್ಸ್ ಹೈದರಾಬಾದ್ (ಬಿಡುಗಡೆಯಾದವರು) : ಹ್ಯಾರಿ ಬ್ರೂಕ್, ಸಮರ್ಥ ವ್ಯಾಸ್, ಕಾರ್ತಿಕ್ ತ್ಯಾಗಿ, ವಿವಾಂತ್ ಶರ್ಮಾ, ಅಖೀಲ್ ಹುಸೇನ್, ಆದಿಲ್ ರಶೀದ್)
ಕೋಲ್ಕತ್ತಾ ನೈಟ್ ರೈಡರ್ಸ್ (ಬಿಡುಗಡೆಯಾದವರು) : ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್, ಡೇವಿಡ್ ವೀಸ್, ಅರ್ಯ ದೇಸಾಯಿ, ಎನ್. ಜಗದೀಶನ್, ಮನ್‌ದೀಪ್ ಸಿಂಗ್, ಕುಲ್ವಂತ್ ಖೆಟ್ರೋಲಿಯಾ, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಜಾನ್ಸನ್ ಚಾರ್ಲ್ಸ್.
ಚೆನ್ನೈ ಸೂಪರ್ ಕಿಂಗ್ಸ್ (ಬಿಡುಗಡೆಯಾದವರು) : ಬೆನ್ ಸ್ಟೋಕ್ಸ್, ಡೈನ್ ಪ್ರಿಟೋರಿಯಸ್, ಅಂಬಟಿ ರಾಯುಡು, ಸಿಸಂದಾ ಮಗಲಾ, ಕೈಲ್ ಜೇಮಿಸನ್, ಭಗತ್ ವರ್ಮಾ, ಸೇನಾಪತಿ ಮತ್ತು ಆಕಾಶ್.
ಡೆಲ್ಲಿ ಕ್ಯಾಪಿಟಲ್ಸ್ (ಬಿಡುಗಡೆಯಾದವರು) : ಮನೀಶ್ ಪಾಂಡೆ, ಸರ್ಫರಾಜ್ ಖಾನ್, ರಿಲಿ ರುಸೊ, ರಿಪಾಲ್ ಪಟೇಲ್, ರೋಮನ್ ಪೊವೆಲ್, ಅಮನ್ ಖಾನ್, ಪ್ರಿಯಮ್ ಗಾರ್ಗ್, ಚೇತನ್ ಸಕಾರಿಯಾ, ಮುಸ್ತಾಫಿಜುರ್ ರೆಹಮಾನ್, ಫಿಲ್ ಸಾಲ್ಟ್, ಕಮಲೇಶ್ ನಾಗರ್‌ಕೋಟಿ.
ರಾಜಸ್ತಾನ ರಾಯಲ್ಸ್ (ಬಿಡುಗಡೆಯಾದವರು) : ಮುರುಗನ್ ಅಶ್ವಿನ್, ಕೆ.ಸಿ.ಕಾರಿಯಪ್ಪ, ಕೆ.ಎಂ. ಆಸೀಫ್, ಆಕಾಶ್ ವಶಿಷ್ಠ, ಅಬ್ದುಲ್ ಬಾಜಿತ್, ಕುಲದೀಪ್ ಯಾದವ್, ಜೋ ರೂಟ್, ಜೇಸನ್ ಹೋಲ್ಡರ್, ಓಬೇದ್ ಮೆಕಾಯ್.
ಪಂಜಾಬ್ ಕಿಂಗ್ಸ್ (ಬಿಡುಗಡೆಯಾದವರು) : ಭನುಕ ರಾಜಪಕ್ಕೆ, ಮೋಹಿತ್ ರಾಥಿ, ಬಾಲತೇಜ್ ಧಂಡಾ, ರಾಜ್ ಅಂಗದ್ ಬಾವಾ, ಶಾರುಖ್ ಖಾನ್.
ಟ್ರೇಡ್‌ನಲ್ಲಿ ಆಟಗಾರರ ವಿನಿಮಯ:
ಟ್ರೇಡ್ ವಿಂಡೋ ನಿಯಮದಡಿಯಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಶಹಬಾಜ್ ಅಹಮದ್ ಮತ್ತು ಸನ್‌ರೈಸರ್ಸ್ ತಂಡದಲ್ಲಿದ್ದ ಮಯಾಂಕ್ ಡಾಗರ್ ಅವರನ್ನು ಫ್ರಾಂಚೈಸಿಗಳು ಪರಸ್ಪರ ವಿನಿಮಯ ಮಾಡಿಕೊಂಡಿವೆ.
ಲಖನೌ ತಂಡದಲ್ಲಿ ರೊಮಾರಿಯೋ ಶೆಫರ್ಡ್ ಮತ್ತು ಅವೇಶ್ ಖಾನ್ ಅವರನ್ನು ಬಿಡುಗಡೆ ಮಾಡಲಾಗಿದೆ. ಶೆಫರ್ಡ್ ಮುಂಬೈ ತಂಡವನ್ನು ಹಾಗೂ ಆವೇಶ್ ರಾಜಸ್ತಾನ ತಂಡವನ್ನು ಸೇರಿಕೊಳ್ಳಲಿದ್ದಾರೆ.
ರಾಜಸ್ತಾನ ತಂಡದಲ್ಲಿದ್ದ ಕರ್ನಾಟಕದ ದೇವದತ್ತ ಪಡಿಕ್ಕಲ್ ಅವರು ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.