Mysore
23
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

IPL Retention 2024:  ಡೆಲ್ಲಿ ಕ್ಯಾಪಿಟಲ್ಸ್‌ ಉಳಸಿಕೊಂಡ, ಕೈಬಿಟ್ಟ ಆಟಗಾರರ ಪಟ್ಟಿ

2024 ರ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಲಿರುವ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ಡಿಸೆಂಬರ್ 19ರಂದು ದುಬೈನಲ್ಲಿ ಮಿನಿ ಹರಾಜು ಪ್ರಕ್ರಿಯೆಯನ್ನು ಏರ್ಪಡಿಸಲಾಗಿದೆ. ಇನ್ನು ಎಲ್ಲಾ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತವೆ ಹಾಗೂ ಯಾವ ಆಟಗಾರರನ್ನು ಬಿಡುಗಡೆಗೊಳಿಸುತ್ತೆ ಎಂಬುದನ್ನು ಪ್ರಕಟಿಸಲು ಇಂದು (ನವೆಂಬರ್ 26) ಸಂಜೆ 4 ಗಂಟೆಯೇ ಡೆಡ್‌ಲೈನ್ ಆಗಿತ್ತು.

ಈ ಸಮಯದ ಗಡುವು ಈಗ ಮುಕ್ತಾಯವಾಗಿದ್ದು, ಯಾವ ತಂಡಗಳು ಯಾವ ಆಟಗಾರರನ್ನು ರಿಟೈನ್ ಮಾಡಿಕೊಂಡಿವೆ ಹಾಗೂ ಯಾವ ಆಟಗಾರರನ್ನು ರಿಲೀಸ್ ಮಾಡಿವೆ ಎಂಬ ಮಾಹಿತಿ ಹೊರಬಿದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿ ಯಾವೆಲ್ಲಾ ಆಟಗಾರರಿಗೆ ಸ್ಥಾನ ನೀಡಿದೆ ಹಾಗೂ ಯಾವೆಲ್ಲಾ ಆಟಗಾರರಿಗೆ ಕೊಕ್ ಕೊಟ್ಟಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಉಳಿಸಿಕೊಂಡ ಆಟಗಾರರು : ಡೆವಿಡ್‌ ವಾರ್ನರ್‌, ಪೃಥ್ವಿ ಶಾ, ಮಿಚೆಲ್‌ ಮಾರ್ಷ್‌, ರಿಷಭ್‌ ಪಂತ್‌, ಇಶಾನ್‌ ಪೊರೆಲ್‌, ಅಕ್ಷರ್‌ ಪಟೇಲ್‌, ಲಲಿತ್‌ ಯಾದವ್‌, ಯಶ್‌ ದುಲ್‌, ಪ್ರವೀಣ್‌ ದುಬೆ, ಎನ್ರಿಚ್‌ ನೋಕಿಯೋ, ಕುಲ್ದೀಪ್‌ ಯಾದವ್‌, ಖಲೀಲ್‌ ಅಹ್ಮದ್‌, ಇಶಾಂತ್‌ ಶರ್ಮಾ, ಮುಖೇಶ್‌ ಕುಮಾರ್‌, ವಿಕ್ಕಿ ಒಸ್ತ್ವಾಲ್‌,

ಬಿಡುಗಡೆಗೊಂಡ ಆಟಗಾರರು : ರಿಲ್ಲಿ ರೂಸೋ, ಚೇತನ್‌ ಸಕಾರಿಯಾ, ರೊಮನ್‌ ಪೋವೆಲ್‌, ಮನೀಶ್‌ ಪಾಂಡೆ, ಪಿಲಿಪ್‌ ಸಾಲ್ಟ್‌, ಎಂ. ರಹಮಾನ್‌, ನಾಗರಕೋಟಿ, ರಿಪಲ್‌ ಪಟೇಲ್‌, ಸರ್ಫರಾಜ್‌ ಖಾನ್‌, ಅಮಾನ್‌ ಖಾನ್‌, ಪ್ರಿಯಾಮ್‌ ಗಾರ್ಗ್‌

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!