Mysore
24
few clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

IPL Retention 2024: ಸೀಸನ್‌-17 ನಲ್ಲಿ ಆಡಲಿದ್ದಾರಾ ಧೋನಿ?: ಸ್ಟೋಕ್ಸ್‌ಗೆ ಕೋಕ್‌ ಕೊಟ್ಟ ಸಿಎಸ್‌ಕೆ

2024 ರ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಲಿರುವ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ಡಿಸೆಂಬರ್ 19ರಂದು ದುಬೈನಲ್ಲಿ ಮಿನಿ ಹರಾಜು ಪ್ರಕ್ರಿಯೆಯನ್ನು ಏರ್ಪಡಿಸಲಾಗಿದೆ. ಇನ್ನು ಎಲ್ಲಾ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತವೆ ಹಾಗೂ ಯಾವ ಆಟಗಾರರನ್ನು ಬಿಡುಗಡೆಗೊಳಿಸುತ್ತೆ ಎಂಬುದನ್ನು ಪ್ರಕಟಿಸಲು ಇಂದು (ನವೆಂಬರ್ 26) ಸಂಜೆ 4 ಗಂಟೆಯೇ ಡೆಡ್‌ಲೈನ್ ಆಗಿತ್ತು.

ಈ ಸಮಯದ ಗಡುವು ಈಗ ಮುಕ್ತಾಯವಾಗಿದ್ದು, ಯಾವ ತಂಡಗಳು ಯಾವ ಆಟಗಾರರನ್ನು ರಿಟೈನ್ ಮಾಡಿಕೊಂಡಿವೆ ಹಾಗೂ ಯಾವ ಆಟಗಾರರನ್ನು ರಿಲೀಸ್ ಮಾಡಿವೆ ಎಂಬ ಮಾಹಿತಿ ಹೊರಬಿದ್ದಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿ ಯಾವೆಲ್ಲಾ ಆಟಗಾರರಿಗೆ ಸ್ಥಾನ ನೀಡಿದೆ ಹಾಗೂ ಯಾವೆಲ್ಲಾ ಆಟಗಾರರಿಗೆ ಕೊಕ್ ಕೊಟ್ಟಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಉಳಿಸಿಕೊಂಡ ಆಟಗಾರರು : ನಾಯಕ ಮಹೇಂದ್ರ ಸಿಂಗ್‌ ಧೋನಿ, ಋತುರಾಜ್‌ ಗಾಯಕ್ವಾಡ್‌, ಡೆವೋನ್‌ ಕಾನ್ವೆ, ದೀಪಕ್‌ ಚಾಹರ್‌, ತುಷಾರ್‌ ದೇಶ್‌ಪಾಂಡೆ, ಮಹೀಶಾ ತೀಕ್ಷಣ, ಸಿಮ್ರನ್‌ಜಿತ್‌ ಸಿಂಗ್‌, ಮತೀಶ ಪತಿರಣ, ಪ್ರಶಾಂತ್‌ ಸೋಲಂಕಿ, ಮಿಚೆಲ್‌ ಸ್ಯಾಂಟ್ನರ್‌, ಹಂಗ್ರೇಕರ್‌, ರವೀಂದ್ರ ಜಡೇಜಾ, ಮೋಯಿನ್‌ ಅಲಿ, ಶಿವಂ ದುಬೆ, ಅಜಿಂಕ್ಯಾ ರಹಾನೆ, ನಿಶಾಂತ್‌ ಸಿಂಧು, ಶೇಕ್‌ ರಶೀದ್‌, ಅಜಯ್‌ ಮಂಡಲ್‌, ಮುಖೇಶ್‌ ಚೌಧರಿ

ಬಿಡುಗಡೆಗೊಂಡ ಆಟಗಾರರು : ಬೆನ್‌ ಸ್ಟೋಕ್ಸ್‌, ಡ್ವೇನ್‌ ಪ್ರಿಟೋರಿಯಸ್‌, ಭಗತ್‌ ವರ್ಮಾ, ಸೇನಾಪತಿ, ಆಕಾಶ್‌ ಸಿಂಗ್‌, ಕೈಲ್‌ ಜಾಮಿಂನ್ಸನ್‌, ಮಲಗ, ಅಂಬಾಟಿ ರಾಯುಡು.

2023 ರಲ್ಲಿನ ಐಪಿಎಲ್‌ ನಲ್ಲಿ ನೀರಸ ಪ್ರದರ್ಶನ ತೋರಿದ್ದ ಬೆನ್‌ ಸ್ಟೋಕ್ಸ್‌ ಸಿಎಸ್‌ಕೆ ಪ್ರಾಂಚೈಸಿಯಿಂದ ಬಿಡುಗಡೆಗೊಂಡಿದ್ದಾರೆ. ಈ ಬಗ್ಗೆ ಸ್ಟೋಕ್ಸ್‌ ಮಾತನಾಡಿದ್ದು, ಮುಂದಿನ ವರ್ಷದ ಹೆವಿ ವರ್ಕ್‌ ಲೋಡ್‌ ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ನಡುವೆ 5 ಟೆಸ್ಟ್‌ ಪಂದ್ಯಗಳು ನಡೆಯಲಿವೆ. ನಂತರ ಜೂನ್‌ ತಿಂಗಳಿನಲ್ಲಿ ಟಿ-20 ವರ್ಲ್ಡ್‌ ಕಪ್‌ ಇರುವುದರಿಂದ ಐಪಿಎಲ್‌ ನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!