ಅಹಮದಾಬಾದ್ : ಅಹಮದಾಬಾದ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ 2025ನೇ ಸಾಲಿನ ಐಪಿಎಲ್‌ನ ಕ್ರಿಕೆಟ್ ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯವು ಸುಮಾರು ಎರಡು ತಾಸುಗಳಷ್ಟು ವಿಳಂಬವಾಗಿ ಆರಂಭವಾಗಿದೆ.
ಪಂದ್ಯವು ಇಂದು ರಾತ್ರಿ 9.45ಕ್ಕೆ ಸರಿಯಾಗಿ ಆರಂಭವಾಗಿದೆ. ಈ ಕುರಿತು ಬಿಸಿಸಿಐ ಮಾಹಿತಿ ನೀಡಿದ್ದು, ಮಳೆಯಿಂದ ಪಂದ್ಯ ತಡವಾಗಿ ಪ್ರಾರಂಭವಾಗಿದೆ. ಅಲ್ಲದೇ ಓವರ್‌ಗಳ ಸಂಖ್ಯೆಯಲ್ಲಿ ಯಾವುದೇ ಕಡಿತವುಂಟಾಗಿಲ್ಲ ಎಂದು ಹೇಳಿದೆ.
ಈ ಮೊದಲು ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ಪಂದ್ಯ ಇನ್ನೇನು ಆರಂಭವಾಗಬೇಕು ಎನ್ನವಷ್ಟರಲ್ಲಿ ಭಾರಿ ಮಳೆ ಸುರಿಯಿತು. ಇಂದರಿಂದ ಪಂದ್ಯಕ್ಕೆ ಅಡಚಣೆಯುಂಟಾಯಿತು.
ಗೆದ್ದ ತಂಡ ಫೈನಲ್‌ಗೆ
ಚೊಚ್ಚಲ ಟ್ರೋಫಿ ಪಡೆಯುವ ಹಂಬಲದಲ್ಲಿರುವ ಪಂಜಾಬ್ ಕಿಂಗ್ಸ್ ತಂಡವು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸುತ್ತಿದೆ.
ಈ ಪಂದ್ಯದಲ್ಲಿ ಗೆದ್ದವರು ಫೈನಲ್ ಪ್ರವೇಶಿಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.





