Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

IPL Mock Auction: ಆರ್‌ಸಿಬಿ ಪಾಲಾದ ಮಿಚೆಲ್‌ ಸ್ಟಾರ್ಕ್‌!

ಮುಂಬೈ: ಬಹುನಿರೀಕ್ಷಿತ 2024ರ ಐಪಿಎಲ್‌ ಹರಾಜು ಪ್ರಕ್ರಿಯೆ ಮಂಗಳವಾರ (ಡಿ.19) ದುಬೈನಲ್ಲಿ ನಡೆಯಲಿದೆ. ಮಧ್ಯಾಹ್ನ 2.30 ಗಂಟೆಗೆ ಹರಾಜು ಪ್ರಕ್ರಿಯೆ ಪ್ರಾರಂಭವಾಗಲಿದೆ.

ಅದಕ್ಕೂ ಮುನ್ನಾ ಜಿಯೋ ಸಿನಿಮಾದಲ್ಲಿ ಇಂದು ಅಣಕು ಹರಾಜು ನಡೆಯಿತು.  ಈ ಹರಾಜಿನಲ್ಲಿ ಆರ್‌ಸಿಬಿ ತಂಡ ಮಿಚೆಲ್‌ಸ್ಟಾರ್ಕ್‌ ಅವರನ್ನು ಖರೀದಿಸಿದೆ.

ಈ ಹರಾಜಿಗೆ ಆರ್‌ಸಿಬಿ ಫ್ರಾಂಚೈಸಿ ಮಾಜಿ ನಿರ್ದೇಶಕ ಮೈಕ್ ಹಸ್ಸಿ ಆರ್ ಸಿಬಿ ತಂಡವನ್ನು ಪ್ರತಿನಿಧಿಸಿದರೆ, ಸುರೇಶ್ ರೈನಾ ಸಿಎಸ್‌ಕೆ, ಇಯಾನ್ ಮೋರ್ಗನ್ ಸನ್‌ರೈಸಸ್‌ ಹೈದರಾಬಾದ್, ಪಾರ್ಥೀವ್ ಪಟೇಲ್ ಗುಜರಾತ್ ಟೈಟನ್ಸ್, ರಾಬಿನ್ ಉತ್ತಪ್ಪ ಕೆಕೆಆರ್ ತಂಡವನ್ನು ಪ್ರತಿನಿಧಿಸಿದರು. ಆಕಾಶ್ ಚೋಪ್ರಾ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರತಿನಿಧಿಯಾಗಿ, ಅನಿಲ್ ಕುಂಬ್ಳೆ ಮುಂಬೈ ಇಂಡಿಯನ್ಸ್ ತಂಡದ ಪ್ರತಿನಿಧಿಯಾಗಿ ಅಣಕು ಹರಾಜಿನಲ್ಲಿ ಭಾಗವಹಿಸಿದ್ದರು.

ಈ ಹರಾಜಿನಲ್ಲಿ ಆಸೀಸ್‌ ವೇಗಿ ಮಿಚೆಲ್‌ ಸ್ಟಾರ್ಕ್‌ ಬರೋಬ್ಬರಿ 18.5 ಕೋಟಿಗೆ ಆರ್‌ಸಿಬಿ ಪಾಲಾದರು. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಗೆರಾಲ್ಡ್ ಕೊಯೆಟ್ಜೆ ಅವರನ್ನು ಗುಜರಾತ್ ಟೈಟನ್ಸ್ ತಂಡದ ಪ್ರತಿನಿಧಿ ಪಾರ್ಥೀವ್ ಪಟೇಲ್ 18 ಕೋಟಿ ರೂಪಾಯಿಗೆ ಬಿಡ್ ಮಾಡುವ ಮೂಲಕ ತಂಡಕ್ಕೆ ಸೇರ್ಪಡೆಯಾದರು. ಇನ್ನು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ 17.50 ಕೋಟಿ ರೂಪಾಯಿಗೆ ಹರಾಜಾದರು.

ಆಲ್‌ರೌಂಡರ್ ಶಾರ್ದೂಲ್ ಠಾಕೂರ್ 14 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾದರು. ಶ್ರೀಲಂಕಾದ ವೇಗದ ಬೌಲರ್ ದಿಲ್ಷನ್ ಮಧುಶಂಕ 10.50 ಕೋಟಿ ರೂಪಾಯಿಗೆ ಕೆಕೆಆರ್ ತಂಡಕ್ಕೆ ಸೇರಿದರು. ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ 9.50 ಕೋಟಿ ರೂಪಾಯಿಗೆ ಗುಜರಾತ್ ಟೈಟನ್ಸ್ ತಂಡವನ್ನು ಸೇರಿದರೆ, ಶ್ರೀಲಂಕಾ ಆಲ್‌ರೌಂಡರ್ ವನಿಂದು ಹಸರಂಗ 8.50 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿದರು.

ಇದು ಕೇವಲ ಅಣಕು ಹರಾಜಾಗಿದ್ದು ಮಾಜಿ ಕ್ರಿಕೆಟಿಗರು ಇದರಲ್ಲಿ ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದ್ದಲ್ಲದೆ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಡಿಸೆಂಬರ್‌ 19 ರಂದು ಯಾವೆಲ್ಲಾ ಆಟಗಾರರಿಗೆ ಮನ್ನಣೆ ದೊರೆಲಿದೆ, ಇತ್ಯಾದಿ ಅಂಶಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ