ಗುವಾಹಟಿ : ಭಾರತ ಮತ್ತು ಬಾಂಗ್ಲಾದೇಶ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಉದ್ವಿಘ್ನಗೊಂಡಿರುವ ನಡುವೆ, ಇಂಡಿಯನ್ ಪ್ರಿಮಿಯರ್ ಲೀಗ್‍ನ(ಐಪಿಎಲ್) 2026ರ ಆವೃತ್ತಿಗೆ ಆಯ್ಕೆಯಾಗಿದ್ದ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಡಳಿತ ಮಂಡಳಿ ಕೈಬಿಟ್ಟಿದೆ.
ಕಳೆದ ತಿಂಗಳು ನಡೆದ ಆಟಗಾರರ ಹರಾಜಿನಲ್ಲಿ ಚೆನ್ನೈಸೂಪರ್ ಕಿಂಗ್ ಮತ್ತು ದೆಹಲಿ ಕ್ಯಾಪಿಟಲ್ ಜೊತೆಗಿನ ಜಿದ್ದಾಜಿದ್ದ ಬಿಡ್ಡಿಂಗ್ ನಂತರ ಕೆಕೆಆರ್ 30 ವರ್ಷದ ಎಡಗೈ ಬೌಲರ್‍ಅನ್ನು 2 ಕೋಟಿ ರೂ.ಮೂಲ ಬೆಲೆಯಿಂದ 9.20 ಕೋಟಿ ರೂ.ಗೆ ಪಡೆದುಕೊಂಡಿತ್ತು. ಹಲವಾರು ಟೀಕೆಗಳ ನಡುವೆ ಇಂದು ಎಚ್ಚೆತ್ತ ಬಿಸಿಸಿಐ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿತ್ತು. ಅಲ್ಲದೇ ಅಗತ್ಯವಿದ್ದರೆ ಕೆಕೆಆರ್ ಬದಲಿ ಆಟಗಾರನನ್ನು ಹೆಸರಿಸಲು ಅವಕಾಶ ನೀಡಲಾಗುವುದು ಎಂದು ಬಿಸಿಸಿಐ ಘೋಷಣೆ ಮಾಡಿದೆ.
ಇತ್ತೀಚೆಗೆ ಬಾಂಗ್ಲದೇಶದಲ್ಲಿ ಸಂಭವಿಸಿದ ಕೆಲ ಘಟನೆಯಿಂದ ಉಭಯ ದೇಶಗಳ ಬಾಂದವ್ಯ ಕುಸಿದಿತ್ತು. ಬಳಿಕ ಕ್ರಿಕೆಟಿಗನ ಭಾಗವಹಿಸುವಿಕೆ ತಡೆಗೆ ಬಿಸಿಸಿಐ ಮೇಲೆ ಒತ್ತಡ ಹೆಚ್ಚುತ್ತಿತ್ತು. ಜನರ ಬಾವನೆಗೆ ಸ್ಪಂದಸಿದ ಬಿಸಿಸಿಐ ಬಾಂಗ್ಲಾ ಆಟಗಾರ ಆಯ್ಕೆಯನ್ನು ರದ್ದು ಮಾಡಿ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಕೆಕೆಆರ್ ತಿಳಿಸಿದೆ. ಈ ಮೂಲಕ ಪ್ರಸ್ತುತ ಎದ್ದಿದ್ದ ವಿವಾದಕ್ಕೆ ತೆರೆ ಎಳೆದಂತಾಗಿದೆ.





