Mysore
26
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

IPL 2025 | ಮಳೆಯದ್ದೇ ಆಟ, ಪಂದ್ಯ ರದ್ದು..!

ಆರ್‌ಸಿಬಿ ಫ್ಲೇ-ಆಫ್‌ ನತ್ತ ; ಕೊಲ್ಕತ್ತಾ ಹೊರಕ್ಕೆ 

ಬೆಂಗಳೂರು : ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು(ಮೇ.17) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್‌ ರೈಡರ್ಸ್‌ ನಡುವೆ ನಡೆಯಬೇಕಿದ್ದ ಐಪಿಎಲ್‌-2025ರ 58ನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

ಪಂದ್ಯ ನೋಡಲು ಲಕ್ಷಾಂತರ ಅಭಿಮಾನಿಗಳು ಕ್ರೀಡಾಂಗಣದತ್ತ ಧಾವಿಸಿ ನಾಲ್ಕು ಗಂಟೆಗೂ ಹೆಚ್ಚು ಕಾದರೂ, ಆದರೆ, ಪಂದ್ಯದ ಟಾಸ್‌ ಕೂಡ ಆಗಲಿಲ್ಲ. ಸತತವಾಗಿ ಸುರಿದ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾಯಿತು. ಅಂತಿಮವಾಗಿ ಕೈಬಿಡಲಾಯಿತು.

ಇದರಿಂದಾಗಿ ಎರಡು ತಂಡಗಳಿಗೂ ಒಂದು ಅಂಕವನ್ನು ಹಂಚಲಾಯಿತು. ಇದರೊಂದಿಗೆ 12 ಪಂದ್ಯಗಳಲ್ಲಿ 17 ಅಂಕ ಗಳಿಸಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು, ಪ್ಲೇ-ಆಫ್‌ ಸನಿಹದಲ್ಲಿದೆ. ಇತ್ತ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದರುವ ಕೊಲ್ಕತ್ತಾ ನೈಟ್‌ ರೈಡರ್ಸ್‌ ಇದುವರೆಗೂ 12 ಅಂಕ ಗಳಿಸಿದೆ. ಇದರ ಬಳಿ ಇನ್ನೊಂದ ಪಂದ್ಯ ಮಾತ್ರ ಉಳಿದಿದೆ.

ಭಾರತ-ಪಾಕಿಸ್ತಾನ ನಡುವಣ ಬಿಕ್ಕಟ್ಟಿನಿಂದ ಐಪಿಎಸ್‌ ಪಂದ್ಯಗಳು ಒಂದು ವಾರಗಳ ಕಾಲ ರದ್ದುಗೊಂಡಿತ್ತು. ಇದೀಗ ಪುನಾರರಂಭದ ಪಂದ್ಯದಲ್ಲಿ ಒಂದು ಎಸೆತವನ್ನು ಕಾಣದೇ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.

Tags:
error: Content is protected !!