ಅಹಮದಾಬಾದ್: ನಾಯಕ ಶ್ರೇಯಸ್ ಅಯ್ಯರ್ ಅವರ ಅರ್ಧಶತಕ, ಅರ್ಶ್‌ದೀಪ್ ಸಿಂಗ್ ಮಾರಕ ದಾಳಿಯ ಸಹಾಯದಿಂದ ಪಂಜಾಬ್ ಕಿಂಗ್ಸ್ ಅತಿಥೇಯ ಗುಜರಾತ್ ಟೈಟನ್ಸ್ ತಂಡವನ್ನು 11 ರನ್‌ಗಳ ಅಂತರಿದಿಂದ ಸೋಲಿಸಿದೆ. ಮೊದಲ ಪಂದ್ಯ ಗೆಲ್ಲುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಣ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 243 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಗುಜರಾತ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 232 ರನ್ ಗಳಿಸಿ 11 ರನ್‌ಗಳ ಅಂತರಿಂದ ಸೋಲು ಕಂಡಿತು.
ಪಂಜಾಬ್ ಇನ್ನಿಂಗ್ಸ್: ಟೂರ್ನಿಯ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಪರ ಪ್ರಿಯಾಂಕ್ ಆರ್ಯ ಹಾಗೂ ಪ್ರಭ್‌ಸಿಮ್ರಾನ್ ಇನ್ನಿಂಗ್ಸ್ ಆರಂಭಿಸಿದರು. ಪ್ರಭ್ ಸಿಮ್ರಾನ್ ಐದು ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಆರ್ಯ 23 ಎಸೆತಗಳಲ್ಲಿ 7ಬೌಂಡರಿ, 2 ಸಿಕ್ಸರ್ ಸಹಿತ 47 ರನ್ ಗಳಿಸಿ ಔಟಾದರು.
ಅಜ್ಮತ್ತುಲ್ಲಾ 16(15) ರನ್ ಗಳಿಸಿದರೇ, ಮ್ಯಾಕ್ಸಿ ಇಲ್ಲದ ಔಟ್‌ಗೆ ವಿಕೆಟ್ ಒಪ್ಪಿಸಿದರು. ಸ್ಟೋಯ್ನಿಸ್ 20(15) ರನ್ ಕಲೆಹಾಕಿ ಔಟಾದರು.
ಮತ್ತೊಂದೆಡೆ ನಿಧಾನವಾಗಿ ಬ್ಯಾಟ್ ಬೀಸಿದ ನಾಯಕ ಶ್ರೇಯಸ್ ಅಯ್ಯರ್ ಜಿಟಿ ಬೌಲರ್‌ಗಳನ್ನು ಬೆಂಡೆತ್ತಿದರು. ಅಯ್ಯರ್ ಔಟಾಗದೇ 42 ಎಸೆತಗಳಲ್ಲಿ 5 ಬೌಂಡರಿ, 9 ಸಿಕ್ಸರ್ ಸಹಿತ 97 ರನ್ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಶಶಾಂಕ್ ಸಿಂಗ್ ಕೇವಲ 16 ಎಸೆತಗಳಲ್ಲಿ 44 ರನ್ ಗಳಿಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.
ಗುಜರಾತ್ ಪರ ಸಾಯ್ ಕಿಶೋರ್ ಮೂರು ವಿಕೆಟ್, ರಶೀದ್ ಖಾನ್ ಮತ್ತು ರಬಾಡ ತಲಾ ಒಂದೊಂದು ವಿಕೆಟ್ ಪಡೆದರು.
ಗುಜರಾತ್ ಇನ್ನಿಂಗ್ಸ್: ಬೃಹತ್ ಮೊತ್ತ ಬೆನ್ನತ್ತಿದ ಜಿಟಿಗೆ ಉತ್ತಮ ಆರಂಭ ದೊರೆಯಿತು. ನಾಯಕ ಶುಭ್‌ಮನ್ ಗಿಲ್ 33(14) ಹಾಗೂ ಸಾಯ್ ಸುದರ್ಶನ್ 74(41) ರನ್ ಗಳಿಸಿ ಉತ್ತಮ ಆರಂಭ ಒದಗಿಸಿಕೊಟ್ಟರು.
ಬಳಿಕ ಬಂದ ಬಟ್ಲರ್ 54(33), ರುದರ್‌ಫರ್ಡ್ 46(28) ರನ್ ಗಳಿಸಿ ಹೋರಾಟ ನೀಡಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ರಾಹುಲ್ ತೆವಾಟಿಯ 6(2) ರನ್ ಗಳಿಸಿದರು. ಔಟಾಗದೇ ಶಾರುಖ್ ಖಾನ್ 6(1) ಹಾಗೂ ಅರ್ಶದ್ ಖಾನ್ 1(1) ರನ್ ಗಳಿಸಿ ಸ್ಕ್ರೀಜ್‌ನಲ್ಲಿಯೇ ಉಳಿದರು.
ಪಂಜಾಬ್ ಪರ ಅರ್ಶ್‌ದೀಪ್ ಎರಡು, ಮಾರ್ಕೋ ಎನ್ಸನ್ ಮತ್ತು ಮ್ಯಾಕ್ಸ್‌ವೆಲ್ ತಲಾ ಒಂದೊಂದು ವಿಕೆಟ್ ಪಡೆದರು.