Mysore
16
few clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

IPL 2025 | ರಾಜಸ್ಥಾನ್‌ ವಿರುದ್ಧ ಲಖೌನ್‌ಗೆ ರೋಚಕ ಗೆಲುವು

ಜೈಪುರ್: ಡೆತ್ ಓವರ್‌ನಲ್ಲಿ ಅದ್ಭುತ ಸ್ಪೆಲ್ ಮಾಡಿದ ಲಖನೌ ತಂಡದ ಆವೇಶ್ ಖಾನ್ ಅತಿಥೇಯ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ 2 ರನ್‌ಗಳ ರೋಚಕ ಗೆಲುವು ತಂದುಕೊಟ್ಟರು.

ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿ ಎದುರಾಳಿಗೆ 181 ರನ್ ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿ 2 ವಿಕೆಟ್‌ಗಳ ಅಂತರದ ಹೀನಾಯ ಸೋಲು ಕಂಡಿತು.

ಲಖನೌ ಇನ್ನಿಂಗ್ಸ್: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಖನೌಗೆ ಆರಂಭಿಕ ಹಿನ್ನಡೆ ಎದುರಾಯಿತು. ಆರಂಭಿಕ ಆಟಗಾರ ಐಡೆನ್ ಮಾಕ್ರ್ರಂ 66(45) ರನ್, ಆಯೂಷ್‌ ಬದೋನಿ 50(34) ರನ್ ಹೊರತುಪಡಿಸಿ ಬೇರಾರಿಂದಲೂ ನಿರೀಕ್ಷಿತ ಆಟ ಕಂಡುಬರಲಿಲ್ಲ.

ಮಿಡೆಲ್ ಆರ್ಡರ್ ಕೈಕೊಟ್ಟ ಪರಿಣಾಮ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ತಂಡದ ಪರವಾಗಿ ಮಿಚೆಲ್ ಮಾರ್ಷ್ 4(6), ಪೂರನ್ 11(8), ನಾಯಕ ಪಂತ್ 3(9), ರನ್ ಗಳಿಸಿದರು.

ಕೊನೆಯಲ್ಲಿ ಅಬ್ಬರಿಸಿದ ಅಬ್ದುಲ್ ಸಮದ್ 30(19) ರನ್ ಗಳಿಸಿ ಔಟಾಗದೇ ಉಳಿದರೇ, ಡೆವಿಡ್ ಮಿಲ್ಲರ್ 7(8) ರನ್ ಗಳಿಸಿ ಅವರಿಗೆ ಸಾಥ್ ನೀಡಿದರು.

ರಾಜಸ್ಥಾನ್‌ ಇನ್ನಿಂಗ್ಸ್: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ರಾಜಸ್ಥಾನ್‌ಗೆ ಭರ್ಜರಿ ಆರಂಭ ದೊರೆಯಿತು. ಅತೀಕಿರಿಯ ಆಟಗಾರನಾಗಿ ಐಪಿಎಲ್ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ 34(20) ರನ್ ಕಲೆಹಾಕಿ ಔಟಾದರೇ, ಭರವಸೆ ಆಟಗಾರ ಯಶಸ್ವಿ ಜೈಸ್ವಾಲ್ ಕೇವಲ 52 ಎಸೆತ ಎದುರಿಸಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 74 ರನ್ ಚಚ್ಚಿದರು.

ಬಳಿಕ ಬಂದ ಹೇಟ್ನಾಯರ್ 12(7), ನಾಯಕ ರಿಯಾನ್ ಪರಾಗ್ 39(26) ರನ್ ಗಳಿಸಿ ಅಲ್ಪ ಹೋರಾಟ ನೀಡಿದರು ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಆ ಬಳಿಕ ಬಂದ ಬೇರೆ ಯಾರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಧ್ರುವ್ ಜುರೇಲ್ ಔಟಾಗದೆ 6(5), ಶಿವಂ ದುಬೆ 3(3) ರನ್‌ ಗಳಿಸಿ ಸ್ಟ್ರೀಸ್‌ನಲ್ಲಿದ್ದೂ ತಂಡವನ್ನು ಗೆಲ್ಲಿಸಲಾಗಲಿಲ್ಲ.

ಲಖನೌ ಪರ ಆವೇಶ್‌ ಖಾನ್ ಪ್ರಮುಖ ನಾಲ್ಕು ವಿಕೆಟ್ ಪಡೆದು ಗಮನ ಸೆಳೆದರು. ಮಾಕ್ರ್ರಂ ಹಾಗೂ ಶಾರ್ದುಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದರು.

ಪಂದ್ಯಶ್ರೇಷ್ಠ: ಆವೇಶ್ ಖಾನ್

Tags:
error: Content is protected !!