Mysore
19
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಕೆವಿನ್‌ ಮೆಂಟರ್‌

ನವದೆಹಲಿ: ಇಂಗ್ಲೆಂಡ್‌ ತಂಡದ ಮಾಜಿ ಆಟಗಾರ ಕೆವಿನ್‌ ಪೀಟರ್ಸನ್‌ ಮುಂದೆ ನಡೆಯುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮೆಂಟರ್‌ ಆಗಿ ಗುರುವಾರ ಸೇರ್ಪಡೆಯಾಗಿದ್ದಾರೆ.

ಈ ಹಿಂದೆ 2014ರ IPL ನಲ್ಲಿ ಆಗಿನ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡಕ್ಕೆ ನಾಯಕರಾಗಿ ಆಡಿದ್ದರು. 2016ರಲ್ಲಿ ಅವರು ಕೊನೆಯ ಬಾರಿ ಐಪಿಎಲ್‌ನಲ್ಲಿ ಆಡಿದ್ದರು.

ತವರು ಡೆಲ್ಲಿ ತಂಡಕ್ಕೆ ಆಟಗಾರನಾಗಿ ಈ ಹಿಂದೆ ಆಡಿದೆ. ಈಗ ಮೆಂಟರ್‌ ಆಗಿ ಪುನಃ ತಂಡಕ್ಕೆ ಮರಳುತ್ತಿರುವುದು ಖುಷಿಯಾಗುತ್ತಿದೆ ಎಂದು ಕೆವಿನ್‌ ಪೀಟರ್ಸನ್‌ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಇದುವರೆಗೂ ಐಪಿಎಲ್‌ ಟ್ರೋಫಿ ಜಯಿಸಿಲ್ಲ. ಒಮ್ಮೆ ಫೈನಲ್‌, ಈ ಹಿಂದಿನ ಆವೃತ್ತಿಯಲ್ಲಿ ಆರನೇ ಸ್ಥಾನಗಳಿಸಿದ್ದೇ ಉತ್ತಮ ಸಾಧನೆಯಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮಾರ್ಚ್‌ 22ರಂದು ಆರಂಭವಾಗುವ ಈ ಬಾರಿಯ ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ.

 

Tags:
error: Content is protected !!